ವಾರ್ಡ್ ಸಮಿತಿ ಚಾಲನೆಯ ವಿಘ್ನ ಗಳಿಗೆ ವಿಘ್ನ ವಿನಾಶಕ ನಿಂದಲೇ ಮನವಿ

Advertisement

ಕರ್ನಾಟಕ ವಾರ್ಡ್ ಸಮಿತಿ ಬಳಗದ ಸಹಯೋಗ ದಲ್ಲಿ ಹುಬ್ಬಳ್ಳಿ ಧಾರವಾಡ ವಾರ್ಡ್ ಸಮಿತಿ ಬಳಗದ ವತಿಯಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ
ಶ್ರೀ ಈರೇಶ ಅಂಚಟಗೇರಿ ಅವರಿಗೆ

ನಾಗರಿಕರ ವಾರ್ಡ್ ಸಮಿತಿಗಳ ರಚನೆ ಪ್ರಕ್ರಿಯೆ ಇತ್ತೀಚಿನ ನಿರ್ಣಯ ಮರುಪರಿಶಿಲಿಸಲು , ಹಾಗೂ ನಾಗರಿಕರ ಹಕ್ಕುಗಳನ್ನು ಮಹಾನಗರ ಪಾಲಿಕೆಯಿಂದ ರಕ್ಷಿಸಿ ಗೌರವಿಸುವ ಕುರಿತು ಹುಬ್ಬಳ್ಳಿ ಧಾರವಾಡ ನಾ ಸಹಯೋಗದಲ್ಲಿ, ಸಮಗ್ರ ಅವಳಿನಗರದ ನಾಗರಿಕರ ಮನದಾಳದ ಮಾತುಗಳನ್ನು, ಒತ್ತಾಯಪೂರ್ವಕ ಆಗ್ರಹವನ್ನು, ಮನವಿ ಸಲ್ಲಿಸುವುದರ ಮೂಲಕ ಹಾಗೂ ಸಾಂಕೇತಿಕವಾಗಿ ವಾರ್ಡ್ ಸಮಿತಿ ರಚನೆ ಪ್ರಕ್ರಿಯೆಗೆ ಬಂದ ಎಲ್ಲ ವಿಘ್ನಗಳು ಪರಿಹಾರವಾಗಲು ಗಣೇಶನ ಪೋಷಾಕಿನ ರಂಗಕರ್ಮಿ ನಟ ಈರಣ್ಣ ಕಂಠೀಗಾವಿ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ,ಉಪ ಮಹಾಪೌರರನ್ನು ಹಾಗೂ ಆಯುಕ್ತರ ಅನುಪಸ್ಥಿತಿಯಲ್ಲಿ ಉಪ- ಆಯುಕ್ತರಾದ ಆನಂದ ಕಲ್ಲೋಳಿಕರನ್ನು ಭೇಟಿ ಮಾಡಿ ವಿಷಯವನ್ನು ಚರ್ಚಿಸಿ ಮನವಿಯನ್ನು ಅರ್ಪಿಸಲಾಯಿತು.

ನಿಯೋಗದಲ್ಲಿ ಹುಬ್ಬಳ್ಳಿ ಧಾರವಾಡ ಸಮಿತಿ ಬಳಗದ ಸಂಚಾಲಕ ಲಿಂಗರಾಜ ಧಾರವಾಡ ಶೆಟ್ಟರ್, ಶಿವಶಂಕರ ಐಹೊಳೆ, ಶಿವಾನಂದ ಬೆಳವಟಗಿ, ಜಗದೀಶ್ ಉಣಕಲ್, ವಿ ಜಿ ಪಾಟೀಲ್, ಕರ್ಜಗಿ, ನವಲಿ, ಸರೋಜಿನಿ ಕಡೆಮನಿ ಸುಧೀರ್ ಅಂಬೇಕರ, ಗೋಪಾಲಕೃಷ್ಣ ಬಿಜಾಪುರ್, ಲೋಕೇಶ್ ಜಾದವ್ ಸಾರಾ ಗೋಕಾವಿ ಶಾರದಾ ಪಾಟೀಲ್, ಶೋಭಾ ಕಿಲ್ಲೆದಾರ,ಬದ್ದಿ ಮುಂತಾದ ನಾಗರಿಕ ರು ಉಪಸ್ಥಿತರಿದ್ದರು