ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ರಂಗಪಂಚಮಿ ಸಡಗರ ಮನೆ ಮಾಡಿದೆ. ಮುಂಜಾನೆಯಿಂದ ಮಂದವಾಗಿದ್ದ, ಹೋಳಿ ಆಚರಣೆ 11.30 ರ ನಂತರ ಸಡಗರ ಪಡೆಯಿತು. ಯುವಕರು, ಯುವತಿಯರು, ಮಕ್ಕಳಾದಿಯಾಗಿ ಪೀಪಿ ಊದುತ್ತಾ, ಹಲಗಿ ಬಾರಿಸುತ್ತಾ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ದುರ್ಗದ ಬಯಲು, ಚನ್ನಮ್ಮ ವೃತ್ತ, ಮೇದಾರ ಓಣಿ, ಮರಾಠಾಗಲ್ಲಿ, ಚನ್ನಪೇಟೆ, ಜನತಾಬಜಾರ್ ಸೇರಿದಂತೆ ಹಳೇಹುಬ್ಬಳ್ಳಿಯಲ್ಲಿ ರಂಗಪಂಚಮಿ ಜೋರಾಗಿತ್ತು. ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಹೋಳಿ ಆಚರಣೆ ಸ್ವಲ್ಪ ರಂಗು ಕಡಿಮೆ ಇತ್ತು. ಸೆಲ್ಪಿ ಕ್ಲಿಕಿಸಿಕೊಳ್ಳುವುದು, ಬೈಕ್ ನಲ್ಲಿ ಸುತ್ತಾಡುವುದು ಎಲ್ಲೇಡೆ ಕಂಡು ಬಂತು.