ವಕೀಲರ ಸಂಘದ ಚುನಾವಣೆ: 4ರಂದು ಮತದಾನ

ವಕೀಲರ ಚುನಾವಣೆ
Advertisement

ಬಾಗಲಕೋಟೆ: ಜಿಲ್ಲೆಯ ಪ್ರತಿಷ್ಠಿತ ಬನಹಟ್ಟಿ ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆಯು ಏ. 4ರಂದು ಮಂಗಳವಾರ ಬನಹಟ್ಟಿಯ ವಕೀಲರ ಸಂಘದ ಭವನದಲ್ಲಿ ಬೆಳಿಗ್ಗೆ 10ರಿಂದ 3ಗಂಟೆಯವರೆಗೆ ನಡೆಯಲಿದೆ.
ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಸಹಕಾರ್ಯದರ್ಶಿ ಹೀಗೆ ಮೂರು ಸ್ಥಾನಗಳ ಪೈಕಿ ಸಹಕಾರ್ಯದರ್ಶಿ ಸ್ಥಾನಕ್ಕೆ ಪಿ.ಜಿ. ಪಾಟೀಲ ಅವಿರೋಧ ಆಯ್ಕೆಗೊಂಡಿದ್ದು, ಅಧ್ಯಕ್ಷ ಸ್ಥಾನಕ್ಕೆ ಬಸವರಾಜ ಪುಟಾಣಿ ಮತ್ತು ಸಾಗರ ಕುಲಕರ್ಣಿ, ಕಾರ್ಯದರ್ಶಿ ಸ್ಥಾನಕ್ಕೆ ಬಿ.ಆರ್. ಯಲ್ಲಟ್ಟಿ ಮತ್ತು ಎಸ್.ಜಿ. ಸಲಬನ್ನವರೊಂದಿಗೆ ನೇರ ಹಣಾಹಣಿ ನಡೆಯಲಿದೆ.
ಎರಡು ವರ್ಷದ ಅವಧಿಗೆ ನಡೆಯುವ ಈ ಚುನಾವಣೆಯಲ್ಲಿ ಈಗಾಗಲೇ ಅಧ್ಯಕ್ಷರಾದವರೇ ಮತ್ತೊಂದು ಬಾರಿ ಕಣದಲ್ಲಿರುವುದು ವಿಶೇಷ. ಒಟ್ಟು 157 ಮತಗಳನ್ನು ಹೊಂದಿರುವ ವಕೀಲರ ಸಂಘದ ಚುನಾವಣೆ ಭಾರಿ ಕುತೂಹಲ ಮೂಡಿಸಿದೆ.