ನವದೆಹಲಿ: ಕಲಬುರಗಿ – ಬೆಂಗಳೂರು ಹೊಸ ರೇಲ್ವೆಯನ್ನು ಮುಂಜೂರು ಮಾಡಬೇಕು ಎಂದು ಸಂಸದ ಉಮೇಶ್ ಜಾಧವ್ ಲೋಕಸಭೆಯಲ್ಲಿ ವಿನಂತಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಅವರು “ಮುಂಬಯಿ – ಸೋಲಾಪುರ್ ” ವಂದೇ ಭಾರತ ಎಕ್ಸ್ಪ್ರೆಸ್” ರೈಲ್ವೆಯನ್ನು ಕಲಬುರಗಿ ವರೆಗೆ ವಿಸ್ತರಿಸಬೇಕು ಹಾಗೂ ಕಲಬುರಗಿ – ಬೆಂಗಳೂರು ಹೊಸ ರೇಲ್ವೆಯನ್ನು ಮುಂಜೂರು ಮಾಡಬೇಕೆಂದು ಇಂದು ಲೋಕಸಭೆಯ ಸಭಾಪತಿಗಳ ಮೂಲಕ ಮಾನ್ಯ ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ ರವರಿಗೆ ವಿನಂತಿಸಿದೆ ಎಂದು ಬರೆದುಕೊಂಡಿದ್ದಾರೆ.