ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಡಿಕ್ಕಿ: ಮಹಿಳೆ ಸಾವು

ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು
Advertisement

ಅಹಮದಾಬಾದ್: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು 54 ವರ್ಷದ ಮಹಿಳೆ ಸಾವನ್ನಪ್ಪಿರುವ ಘಟನೆ ಗುಜರಾತ್‌ನ ಆನಂದ್ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಗುಜರಾತ್​ನ ಆನಂದ್ ರೈಲು ನಿಲ್ದಾಣದ ಬಳಿ ಬೀಟ್ರಿಸ್ ಆರ್ಚಿಬಾಲ್ಡ್ ಪೀಟರ್ ಎಂಬ 54 ವರ್ಷದ ಮಹಿಳೆ ಹಳಿ ದಾಟುತ್ತಿದ್ದಾಗ ಅವರ ಮೇಲೆ ರೈಲು ಹಾದುಹೋಗಿದೆ.