ವಂದೇ ಭಾರತ್​ ಎಕ್ಸ್​ಪ್ರೆಸ್​ಗೆ ಡಿಕ್ಕಿ ಹೊಡೆದ ಹಸು; ರೈಲಿನ ಮುಂಭಾಗ ಜಖಂ

vande matram
Advertisement

ಮುಂಬೈನಿಂದ ಅಹಮದಾಬಾದ್​ಗೆ ತೆರಳುತ್ತಿದ್ದ ವಂದೇ ಭಾರತ್​ ರೈಲುಹಸುವಿಗೆ ಡಿಕ್ಕಿ ಹೊಡೆದಿದ್ದರಿಂದ ರೈಲಿನ ಮುಂಭಾಗಕ್ಕೆ ಹಾನಿಯಾಗಿದೆ.
ವಂದೇ ಭಾರತ್ ರೈಲು ಗುಜರಾತ್‌ನ ವಲ್ಸಾದ್‌ನಿಂದ ಹಾದು ಹೋಗುತ್ತಿದ್ದಾಗ ಹಸುವೊಂದು ರೈಲಿಗೆ ಡಿಕ್ಕಿ ಹೊಡೆದಿದೆ. ಆದರೆ, ಇದರಿಂದ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ. ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಈ ಘಟನೆಯ ಬಳಿಕ ರೈಲು ಕೆಲಕಾಲ ಅದೇ ಸ್ಥಳದಲ್ಲಿ ನಿಂತಿತ್ತು. ಸ್ವಲ್ಪ ಸಮಯದ ನಂತರ ರೈಲನ್ನು ಮುಂದಕ್ಕೆ ಕಳುಹಿಸಲಾಯಿತು.