ಗದಗ ನಗರದ ಅಗ್ನಿಶಾಮಕ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಶಾಲೆಯ ಪರವಾನಿಗೆ ನವೀಕರಣದ ನಿರಪೇಕ್ಷಣಾ ಪತ್ರ ನೀಡಲು 7 ಸಾವಿರ ಲಂಚದ ಬೇಡಿಕೆ ಇಟ್ಟಿದ್ದ ಅಗ್ನಿಶಾಮಕ ಅಧಿಕಾರಿ ನವೀನ ಕುಮಾರ ಕಗ್ಗಲಗೌಡ್ರ ರೆಡ್ ಹ್ಯಾಂಡ್ ಆಗಿ ಸಿಲುಕಿಕೊಂಡಿದ್ದಾರೆ.
ಗದಗ ನಗರದ ಎಪಿಎಂಸಿ ಆವರಣದಲ್ಲಿರುವ ಅಗ್ನಿ ಶಾಮಕ ಕಚೇರಿಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಸಿ.ಬಿ. ಮೊಗಲಿ ಅವರಿಂದ ಏಳು ಸಾವಿರ ರೂಪಾಯಿ ಲಂಚವನ್ನು ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.