ಲೇಡಿ ಇನ್ಸಪೆಕ್ಟರ ವಿರುದ್ಧ ದೂರು, ನ್ಯಾಯಕ್ಕೆ ಮೊರೆ

ನೇಮಕಾತಿ
Advertisement

ಬಾಗಲಕೋಟೆ: ಎಫ್‌ಡಿಎ ನೇಮಕಾತಿಯಲ್ಲಿ ಲೇಡಿ ಇನ್ಸಪೆಕ್ಟರ್ ಅವರಿಗೆ ಹಣ ನೀಡಿದ್ದಾರೆನ್ನಲಾದ ವ್ಯಕ್ತಿಯ ಸೋದರರು ಬಾಗಲಕೋಟೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ.
ಲಕ್ಷಾಂತರ ರೂ. ವಂಚನೆಯ ಪ್ರಕರಣದಲ್ಲಿ ಆರೋಪ ಹೊತ್ತವರು ಮೈಸೂರ ಎನ್.ಆರ್.ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಆಗಿರುವ ಈ ಭಾಗದ ಜಮಖಂಡಿ ತಾಲೂಕು ಆಲಗೂರ ಗ್ರಾಮದ ಅಶ್ವಿನಿ ಅನಂತಪುರ ಅವರು ಕೆಪಿಎಸ್‌ಸಿ ವತಿಯಿಂದ ನಡೆದ ಪ್ರಥಮ ದರ್ಜೆ ಸಹಾಯಕರ ನೇಮಕಾತಿಯಲ್ಲಿ ಜಿಲ್ಲೆಯ ಸಂಗಮೇಶ ಜಳಕಿ ಅವರಿಂದ ಹಣದ ವ್ಯವಹಾರ ಮಾಡಿರುವ ಸಂಭಾಷಣೆ, ವಾಟ್ಸಪ್ ಚರ್ಚೆ ವೈರಲ್ ಆಗುತ್ತಿದ್ದಂತೆ ಈ ಪ್ರಕರಣ ಬೆಳಕಿಗೆ ಬಂದಿದೆ.
ಪಿಎಸ್‌ಐ ಒಬ್ಬರು ನೇಮಕಾತಿಯಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸಿರುವದು, ಹಣಕಾಸು ವ್ಯವಹಾರ ಮಾಡಿರುವದು ಕಾನೂನು ಬಾಹಿರವಾಗಿದ್ದು ಇದಕ್ಕೆ ಎಚ್ಚೆತ್ತುಕೊಂಡಿರುವ ಪೊಲೀಸ್ ಅಧಿಕಾರಿಗಳು ಮೇಲ್ನೋಟಕ್ಕೆ ಆರೋಪದಲ್ಲಿ ಸತ್ಯಾಂಶ ಕಂಡುಬಂದಿದೆ ಎಂದು ಅಶ್ವಿನಿ ಅನಂತಪುರ ಅವರನ್ನು ಅಮಾನತ್ತಿನಲ್ಲಿಟ್ಟು ವಿಚಾರಣೆಗೆ ಆದೇಶ ಮಾಡಿದ್ದಾಗಿಯೂ ಗೊತ್ತಾಗಿದೆ.
ಈ ಮಧ್ಯೆ ಸಂಗಮೇಶ ಝಳಕಿ ಅವರ ಸಹೋದರ ಬಸವರಾಜ ಝಳಕಿ ಅವರು ಬಾಗಲಕೋಟೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ ಪ್ರಕರಣದ ಬಗ್ಗೆ ಸುದೀರ್ಘ ಮಾಹಿತಿ ನೀಡಿದ್ದು ಲಕ್ಷಾಂತರ ರೂ. ಹಣ ಪಡೆದು ಈಗ ಕುಟುಂಬಕ್ಕೆ ಜೀವ ಬೆದರಿಕೆ ಹಾಕುತ್ತಿರುವದರಿಂದ ರಕ್ಷಣೆ ಒದಗಿಸಬೇಕು ಹಾಗೂ ನ್ಯಾಯ ಒದಗಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.

ವಂಚನೆಗೊಳಗಾದ ಸಂಗಮೇಶ ಝಳಕಿ