ರಾಜಹಂಸಗಡದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಜೊತೆಗೆ ವೇದಿಕೆ ಹಂಚಿಕೊಳ್ಳಲು ನಾನು ಸಿದ್ಧ. ಅವರೇನು ನಮ್ಮ ವೈರಿನಾ? ಅವರು ನಮ್ಮ ಶಾಸಕರು ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಮಾ. 2ರಂದು ರಾಜಹಂಸಗಡ ಶಿವಾಜಿ ಪ್ರತಿಮೆ ಲೋಕಾರ್ಪಣೆ ನಡೆಯಲಿದೆ. ಅಂದು ಸಂಪೂರ್ಣ ಸರ್ಕಾರಿ ಕಾರ್ಯಕ್ರಮವಿದೆ. ಅದು ಬಿಜೆಪಿ ಕಾರ್ಯಕ್ರಮ ಅಲ್ಲ. ಶಿಷ್ಟಾಚಾರಕ್ಕೆ ಅನುಗುಣವಾಗಿ ಕಾರ್ಯಕ್ರಮ ನಡೆಯುತ್ತದೆ. ಆ ಶಾಸಕರಿಗೆ ಸಿಗುವಂತಹ ಮರ್ಯಾದೆ ಸಿಗಬೇಕು. ಒಳ್ಳೆಯ ರೀತಿ ಕಾರ್ಯಕ್ರಮ ಆಗಬೇಕು ಎಂದರು.
ಕಾರ್ಯಕ್ರಮಕ್ಕೆ ನೀವು ಬರ್ತೀರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾರ್ಯಕ್ರಮಕ್ಕೆ ಬರ್ತೀನಿ, ಇಡೀ ಜಿಲ್ಲೆಯ ಶಾಸಕರಿಗೆ ಆಹ್ವಾನ ಮಾಡುತ್ತಾರೆ, ಹೀಗಾಗಿ ನಾನೂ ಇರುವೆ ಎಂದರು.