ಕೋಲಾರ: ಲಂಚ, ಮಂಚ, ದುಡ್ಡು, ಬೆಡ್ಡು ಇದೇ ಬಿಜೆಪಿ ಕೆಲಸ ಆಗೋಗಿದೆ ಎಂದು ಬಿಜೆಪಿ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಕೋಲಾರದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದಲ್ಲಿ ಇಡೀ ದೇಶದಲ್ಲೇ ಇಲ್ಲಿನ ಸರ್ಕಾರ ದಾಖಲೆ ಮಾಡಿದೆ. ಬಿಜೆಪಿಯ ವಿಜಯಸಂಕಲ್ಪ ಯಾತ್ರೆ, ಒಂದು ಭ್ರಷ್ಟಾಚಾರದ ಯಾತ್ರೆ. ಅವರಲ್ಲಿ 50% ಲೂಟಿ ಬಗ್ಗೆ ಮಾತಾಡ್ತಾರೆ, ಇನ್ನು 50% ರಷ್ಟು ಮಂಚದ ಬಗ್ಗೆ ಮಾತಾಡ್ತಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.