ಲಂಚ ಪಡೆದ ಲೇಡಿ ASI ಲೋಕಾಯುಕ್ತ ಬಲೆಗೆ

Advertisement

ಕೋಲಾರ: 5 ಸಾವಿರ ಲಂಚ ಪಡೆದ ಲೇಡಿ ASI ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. KGF ನ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.
ಎಎಸ್‌ಐ ಫರೀದಾಬಾನು ಎಂಬುವರೇ ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಅಧಿಕಾರಿ. ಪ್ರಕರಣವೊಂದರ ವಿಚಾರವಾಗಿ ಇವರು ಸಯ್ಯದ್ ಯೂಸುಫ್‌ ಎಂಬುವರ ಬಳಿ 5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲೋಕಾಯುಕ್ತ DYSP ಚೈತ್ರ ನೇತೃತ್ವದಲ್ಲಿ ದಾಳಿ ನಡೆದ ವೇಳೆ ಫರೀದಾಬಾನು ಸಿಕ್ಕಿಬಿದ್ದಿದ್ದಾರೆ.