ರೈಲಿನಲ್ಲಿ ಭೀಕರ ಕೊಲೆ

ಸಾವು
Advertisement

ಹುಬ್ಬಳ್ಳಿ: ಗುಂತಕಲ್ ಹುಬ್ಬಳ್ಳಿ ಪ್ಯಾಸೆಂಜರ್ ರೈಲಿನ ಸಾಮಾನ್ಯ ಬೋಗಿಯಲ್ಲಿ, ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಗುಂತಕಲ್- ಹುಬ್ಬಳ್ಳಿ-ರೈಲು ತಡರಾತ್ರಿ ವೇಳೆ ಹುಬ್ಬಳ್ಳಿಯ ನಾಲ್ಕನೇ ಪ್ಲಾಟ್ ಫಾರ್ಮ್ ಗೆ ನಿಲ್ಲಿಸಿದಾಗ ರೈಲಿನ ಸಿಬ್ಬಂದಿಗೆ ವ್ಯಕ್ತಿಯ ಕೊಲೆಯಾಗಿರುವುದು ಕಂಡುಬಂದಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 
ಪ್ರಾಥಮಿಕ ಮಾಹಿತಿ ಪ್ರಕಾರ ಕೊಲೆಯಾದವನನ್ನು ಆಂಧ್ರ ಪ್ರದೇಶದ ಅದ್ವಾನಿ ಎಂಬ ಊರಿನವನು ಎನ್ನಲಾಗಿದೆ ಆದರೆ ಪೊಲೀಸ್ ರು ಮಾಹಿತಿ ಸಂಗ್ರಹಿಸುತ್ತಿದ್ದು, ಬಳಿಕವೇ ಆತ ಎಲ್ಲಿಯಾವನು, ಯಾವ ಉದ್ದೇಶಕ್ಕೆ ಕೊಲೆ ಮಾಡಲಾಗಿದೆ ಎಂಬುದು ತಿಳಿದು ಬರಬೇಕಿದೆ. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.