ರೈತನಿಗೆ ಪರಿಹಾರ ವಿಳಂಬ: ಧಾರವಾಡದ ಉಪ ವಿಭಾಗಾದೀಕಾರಿ ಕಚೇರಿ ಜಪ್ತಿಗೆ ಆದೇಶ

dHARWAD
Advertisement

ಧಾರವಾಡ: ರೈತನಿಗೆ ಭೂಸ್ವಾಧೀನದ ಪರಿಹಾರ ನೀಡದ ಹಿನ್ನೆಲೆಯಲ್ಲಿ ಧಾರವಾಡದ ಉಪ ವಿಭಾಗಾದೀಕಾರಿ ಕಚೇರಿ ಜಪ್ತಿಗೆ ಕೋರ್ಟ್ ಆದೇಶ ನೀಡಿರುವ ಘಟನೆ ನಡೆದಿದೆ.
ಧಾರವಾಡದ ಎರಡನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಲಯ ಆದೇಶದ ಹಿನ್ನೆಲೆಯಲ್ಲಿ ಕಚೇರಿಯನ್ನು ಜಪ್ತಿ ಮಾಡಿದರು.
ಹುಲಿಕೆರೆ ಗ್ರಾಮದ ಇಂದಿರಾ ಕೆರೆಗೆ ಭೂಸ್ವಾಧೀನ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆ ಅಳ್ನಾವರ ತಾಲೂಕಿನ ಗ್ರಾಮದಲ್ಲಿ 2017 ರಲ್ಲಿ ನಡೆದಿದ್ದ ಪ್ರಕ್ರಿಯೆಗೆ ಪರಿಹಾರದ ಹಣ ನೀಡಬೇಕಿದ್ದ ನೀರಾವರಿ ಇಲಾಖೆ ಅಧಿಕಾರಿಗಳು ನಿಲಕ್ಷ್ಯ ವಹಿಸಿದ್ದರು.
ಸುಮಾರು 20 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ನೀಡಲಾಗಿತ್ತು. ವೀರಣ್ಣ ನಾಗಶೆಟ್ಟಿ ಎಂಬುವರಿಗೆ ಸೇರಿದ 13 ಗುಂಟೆ ಭೂಸ್ವಾಧೀನ ಮಾಡಲಾಗಿತ್ತು. ಉಳಿದ 14 ಲಕ್ಷ ರೂಪಾಯಿ ಬಾಕಿ ಪರಿಹಾರದ ಹಣ ನೀಡುವಂತೆ ಕೋರ್ಟ್ ರೈತ ಮೊರೆ ಹೋಗಿದ್ದರು.