ಬ್ರಿಟನ್ ಪ್ರಧಾನಿ ರೇಸ್‌ನಲ್ಲಿದ್ದ ಭಾರತೀಯ ರಿಷಿ ಸುನಕ್ ಅವರನ್ನು ಅಂತಿಮ ಸುತ್ತಿನಲ್ಲಿ ಮಣಿಸಿರುವ ಲಿಜ್ ಟ್ರಸ್ ಅವರು ಬ್ರಿಟನ್ನಿನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಮಾಜಿ ಹಣಕಾಸು ಸಚಿವ ರಿಷಿ ಸುನಕ್ ವಿರುದ್ಧ ಸ್ಪರ್ಧಿಸಿದ್ದ ಲಿಜ್ ಟ್ರಸ್ 81,326 ಮತಗಳನ್ನು ಗಳಿಸಿದರು. ರಿಶಿ ಸುನಕ್ ಪರ 60,399 ಮತಗಳನ್ನು ಚಲಾವಣೆಯಾದವು. ಇದರೊಂದಿಗೆ ಲಿಜ್ ಅವರು ಥೆರೆಸಾ ಹಾಗೂ ಮಾರ್ಗರೇಟ್ ಥ್ಯಾಚರ್ ಬಳಿಕ ಬ್ರಿಟನ್ನಿನ್ ಮೂರನೇ ಮಹಿಳಾ ಪ್ರಧಾನಿ ಆಗಿದ್ದಾರೆ.