ರಾಹುಲ್ ಗಾಂಧಿಗೆ ತಾಕತ್ತಿದ್ದರೆ ಸಿದ್ದರಾಮಯ್ಯ ವಿರುದ್ಧ ಕ್ರಮ ಜರುಗಿಸಲಿ ; ಕೇಂದ್ರ ಸಚಿವ ಜೋಶಿ ಸವಾಲ್

ಪ್ರಲ್ಹಾದ್ ಜೋಶಿ
Advertisement

ಹುಬ್ಬಳ್ಳಿ : ಸಿದ್ದರಾಮಯ್ಯ ನೇರವಾಗಿ ಹಿಂದು ಧರ್ಮದ ವಿರುದ್ಧವಾಗಿ ಮಾತನಾಡಿದ್ದಾರೆ. ರಾಹುಲ್ ಗಾಂಧಿ ಅಲ್ಲಿ ಇಲ್ಲಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಕುಂಕಮ ಹಚ್ಚಿಕೊಂಡು ತಿರುಗುತ್ತಿದ್ದಾರೆ. ಅವರಿಗೆ ತಾಕತ್ತಿದ್ದರೆ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸವಾಲ್ ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಸಿದ್ದರಾಮಯ್ಯ ಅವರು ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದವರು ಸನಾತನ ಧರ್ಮದವರು ಎಂದು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯಿಂದಲೇ ಗೊತ್ತಾಗುತ್ತದೆ ಸಿದ್ದರಾಮಯ್ಯ ಒಬ್ಬ ಕುತ್ಸಿತ ಹಿಂದು ವಿರೋಧಿ, ಹಿಂದು ದ್ವೇಷಿ ಎಂಬುದು ಎಂದು ಟೀಕಿಸಿದರು.
ಸನಾಧರ್ಮದ ಬಗ್ಗೆ ಅಧ್ಯಯನ ಮಾಡಲು, ಸ್ವೀಕಾರ ಮಾಡಲು ಲಕ್ಷಾಂತರ ಜನರು ವಿದೇಶಗಳಿಂದ ಭಾರತಕ್ಕೆ ಬರುತ್ತಿದ್ದಾರೆ. ಸನಾತನ ಧರ್ಮಕ್ಕೆ ಅರ್ಥವಿದೆ. ಅದನ್ನು ಅರ್ಥ ಮಾಡಿಕೊಳ್ಳದೇ ಸಿದ್ದರಾಮಯ್ಯ ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ಕಾಂಗ್ರೆಸ್ ನವರಿಗೆ ಹಿಂದುಗಳು ಬೇಕಿಲ್ಲ. ಬಾಟ್ಲಾ ಹೌಸ್ ಪ್ರಕರಣದಲ್ಲಿ ಮೋಹನ್ ಶರ್ಮಾ ಎಂಬ ಇನ್ ಸ್ಪೆಕ್ಡರ್ ಪ್ರಾಣ ಕಳೆದುಕೊಂಡರುಮ ಅವರ ಬಗ್ಗೆ ಕಾಂಗ್ರೆಸ್ ನವರಿಗೆ, ಸೋನಿಯಾ ಗಾಂಧಿಗೆ ದುಃಖವಾಗಲಿಲ್ಲ. ಕಸಬ್ ಗೆ ಬಿರಿಯಾನಿ ತಿನ್ನಿಸಿದ ಕಾಂಗ್ರೆಸ್ ನವರು ನರೇಂದ್ರ ಮೋದಿಯನ್ನು ಹೇಗಾದರೂ ಮಾಡಿ ಇಳಿಸಬೇಕು ಎಂದು ಪಾಕಿಸ್ತಾನಕ್ಕೆ ಮನವಿ ಮಾಡಿದ್ದರು. ಇದೆಲ್ಲವು ಕಾಂಗ್ರೆಸ್ ಪಕ್ಷ ಹಿಂದುಗಳ ಮತ್ತು ಹಿಂದು ವಿರೋಧಿ ಎಂಬುದನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.ಬಿಜೆಪಿ ರಾಮಮಂದಿರವನ್ನು ಯಾವತ್ತೂ ರಾಜಕೀಯವಾಗಿ ಬಳಸಿಕೊಂಡಿಲ್ಲ. ಅದನ್ನು ಬಳಸಿಕೊಂಡಿದ್ದು ಕಾಂಗ್ರೆಸ್. ರಾಮ ಮಂದಿರಕ್ಕೆ ಬೀಗ ಹಾಕಿಸಿದ್ದಲ್ಲದೇ ರಿಲಿಜಿಯಸ್ ವರ್ಷಿಪ್ ಅ್ಯಕ್ಟ್ ತಂದಿದ್ದು ಹಿಂದುಗಳ ವಿರುದ್ಧವಾಗಿ ಎಂದು ಆರೋಪಿಸಿದರು.
ರಾಷ್ಟ್ರೀಯ ಯುವ ಜನೋತ್ಸವ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಜನವರಿ 12 ರಂದು ಹುಬ್ಬಳ್ಳಿ – ಧಾರವಾಡಕ್ಕೆ ಆಗಮಿಸುತ್ತಿದ್ದಾರೆ. ಸೋಷಿಯಲ್ ಮಿಡೀಯಾದಲ್ಲಿ ಕೆಲವರು ಗೋ ಬ್ಯಾಕ್ ಮೋದಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇದೆಲ್ಲ ನಡೆಯಲ್ಲ. ಮೋದಿಯವರಿಗ ವಿಶ್ವ ವ್ಯಾಪಿ ಯುವ ಅಭಿಮಾನಿಗಳು ಇದ್ದಾರೆ. ಇದೊಂಥರ ಟೂಲ್ ಕಿಟ್ . ಇಂತದ್ದೆಲ್ಲ ಕೆಲಸ ಮಾಡುತ್ತಿರುತ್ತದೆ. ಅದಕ್ಕೆ ಮಹತ್ಚ ಕೊಡಬೇಕಿಲ್ಲ ಎಂದರು.

ಓಟಿಗಾಗಿ ಹಿಂದು ಅಗ್ತಿದ್ದಾರೆ ಸಿದ್ದರಾಮಯ್ಯ
ಈ ಮೊದಲು ಸಿದ್ದರಾಮಯ್ಯ ಹಿಂದು ಎಂದೂ ಹೇಳುತ್ತಿರಲಿಲ್ಲ. ಈಗ ಓಟಿಗಾಗಿ ನಾನು ಹಿಂದು ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಜೋಶಿ ಟೀಕಿಸಿದರು.