ರಾಷ್ಟ್ರೀಯ ಯುವ ಸಮಾವೇಶ -೨೦೨೩ ಲಾಂಛನ ಬಿಡುಗಡೆ

ಲೋಗೋ 01 CM
Advertisement

ಹುಬ್ಬಳ್ಳಿ : ಸ್ವಾಮಿ ವಿವೇಕಾನಂದರ ಜನ್ಮದಿನದ ನಿಮಿತ್ತ ಜನವರಿ 12 ರಿಂದ ಧಾರವಾಡದಲ್ಲಿ ನಡೆಯಲಿರುವ ರಾಷ್ಟ್ರೀಯ ಯುವ ಸಮಾವೇಶ – ೨೦೨೩ ದ ಲಾಂಛನ, ಧ್ಯೇಯವಾಕ್ಯ ಫಲಕಗಳ ಅನಾವರಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವರ್ಚುವಲ್ ವೇದಿಕೆಯಲ್ಲಿ ಶನಿವಾರ ಅನಾವರಣಗೊಳಿಸಿದರು.
ಇಲ್ಲಿನ ಕೆಎಲ್ಇ ತಾಂತ್ರಿಕ ವಿವಿಯ ಬಯೋಟೆಕ್ನಾಲಜಿ ವಿಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಜವಳಿ, ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ , ತಾಂತ್ರಿಕ ವಿವಿ ಕುಲಪತಿ ಪ್ರೊ. ಅಶೋಕ ಶೆಟ್ಟರ ಪಾಲ್ಗೊಂಡಿದ್ದರು.
ದೆಹಲಿಯಿಂದ ಕೇಂದ್ರ ಯುವಜನ ಸೇವಾ ಸಚಿವ ಅನುರಾಗ್ ಠಾಕೂರ್ ಅವರು ಪಾಲ್ಗೊಂಡಿದ್ದರು. ಬೆಂಗಳೂರಿನಲ್ಲಿ ವರ್ಚ್ಯುವಲ್ ವೇದಿಕೆಯಲ್ಲಿ ಲಾಂಛನ ಅನಾವರಣಗೊಳಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಷ್ಟ್ರೀಯ ಅಂತರ್ ವಿವಿ ಕ್ರೀಡಾಕೂಟ ಆಯೋಜನೆ ಅವಕಾಶವನ್ನು ಕೇಂದ್ರ ಯುವಜನ ಸೇವಾ ಇಲಾಖೆ ಕೊಟ್ಟಿತ್ತು. ಅದರ ಯಶಸ್ಸಿನ ಬಳಿಕ ಈಗ ರಾಷ್ಟ್ರೀಯ ತುವ ಸಮಾವೇಶ ಅಯೋಜನೆ ಅವಕಾಶ ನೀಡಿದ್ದು ಹೆಮ್ಮೆಯ ಸಂಗತಿಯಾಗಿದೆ. ಈ ಅವಕಾಶ ನೀಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅನುರಾಗ ಠಾಕೂರ್ ಅವರಿಗೆ, ಆಯೋಜನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಅಧಿಕಾರಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಎಲ್ಲರೂ ಸೇರಿ ಸಮಾವೇಶವನ್ನು ಯಶಸ್ವಿಗೊಳಿಸೋಣ ಎಂದರು.
ಕೇಂದ್ರ ಯುವಜನ ಸಚಿವ ಅನುರಾಗ್ ಠಾಕೂರ್ ಮಾತನಾಡಿ, ಯುವಜನ ಸಮಾವೇಶ ಯಶಸ್ವಿಗೊಳಿಸುವುದು ಕೇಂದ್ರ ಸರ್ಕಾರಕ್ಕಿಂತ ಕರ್ನಾಟಕ ಸರ್ಕಾರದ ಪಾತ್ರ ಮಹತ್ವದ್ದಾಗಿದೆ. ಆ ವಿಶ್ವಾಸ ನಮಗಿದೆ. ಇಲಾಖೆ ಜೊತೆ ಕೈ ಜೋಡಿಸಿದ್ದಕ್ಕೆ ಕರ್ನಾಟಕ ಸರ್ಕಾರಕ್ಜೆ ಕೃತಜ್ಞತೆಗಳು ಎಂದರು. ಕೇಂದ್ರ ಕಲ್ಲಿದ್ಸಲು, ಸಂಸದೀಯ ಖಾತೆ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಈ ಯುವ ಸಮಾವೇಶ ಆಯೋಜನೆ ಉದ್ದೇಶ ಯುವ ಮನಸ್ಸುಗಳನ್ನು ಕೆರಳಿಸುವುದಲ್ಲಮ ಅರಳಿಸುವುದಾಗಿದೆ. ನಮ್ಮ ದೇಶದ ಇತಿಹಾಸ, ಹಿರಿಮೆ ಗರಿಮೆ, ಸಾಧಕರ ಬಗ್ಗೆ ಯುವಸಮೂಹಕ್ಕೆ ತಿಳಿಸಿ ಕೊಡಯವುದಾಗಿದೆ. ಇಂತಹ ಮಹತ್ವದ ಸಮಾವೇಶ ನಮ್ಮ ಧಾರವಾಡದಲ್ಲಿ ಆಯೋಜನೆ ಮಾಡುವ ಅವಕಾಶ ಕಲ್ಪಿಸಿದ್ದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಜನವರಿ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಾಹ್ನ 2 ಗಂಟೆಗೆ ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಸಮಾವೇಶ ಉದ್ಘಾಟನೆ ಮಾಡಲಿದ್ದಾರೆ. ಕೇವಲ ಯುವಕರಿಗಷ್ಟೇ ಸಮಾವೇಶದಲ್ಲಿ ಭಾಗವಹಿಸಲು ಅವಕಾಶವಿದೆ. ಯುವ ಸಮುದಾಯ ಮಾತ್ರ ಸಮಾವೇಶದಲ್ಲಿರಬೇಕು ಎಂದು ಪ್ರಧಾನಿಯವರು ಕಟ್ಟುನಿಟ್ಟಾಗಿ ಅದೇಶಿಸಿರುವುದರಿಂದ ವಯಸ್ಕರಿಗೆ ಅವಕಾಶ ಇಲ್ಲ ಎಂದು ಜೋಶಿ ಹೇಳಿದರು.
ಭಾರತದ್ದು ಅಗಾಧ ಸಾಧನೆ
ಭಾರತ ಜಾಗತಿಕ ಮಟ್ಟದಲ್ಲಿ 5 ನೇ ಪ್ರಬಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಅದೂ ಕೊರೊನಾ ದ ಬಳಿಕ. ಇಂಗ್ಲೆಂಡ್ ಹಿಂದಿಕ್ಕಿ ನಾವು ಮುಂಚೂಣಿಯಲ್ಲಿದ್ದೇವೆ. 15 ವರ್ಷದಲ್ಲಿ ಭಾರತ ಜಗತ್ತಿನ 1 ನೇ ಆರ್ಥಿಕ ಶಕ್ತಿಯಾಗಲಿದೆ ಎಂದು ಹೇಳಿದರು. ತಂತ್ರಜ್ಞಾನ ಅಭಿವೃದ್ಧಿ, ಮೂಲಸೌಕರ್ಯ ಅಭಿವೃದ್ಧಿ ಯೋಜನೆ, ಅನುಷ್ಠಾನ ಒಂದು ಕಡೆಯಾದರೆ ಶೈಕ್ಷಣಿಕವಾಗಿ ದೇಶದ ವಿದ್ಯಾರ್ಥಿಗಳ, ಯುವಕರ ಭವಿಷ್ಯದ ದೃಷ್ಟಿಯಿಂದ ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಶಿಕ್ಷಣ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದರು.