ಬಾಗಲಕೋಟೆ: ಗೋವಿನ ಜೋಳದ ರಾಶಿ ಮಾಡುವ ವೇಳೆ ರಾಶಿ ಮಶೀನ್‌ಗೆ ಸಿಲುಕಿ ಮಹಿಳೆಯೋರ್ವಳು ಮೃತಪಟ್ಟಿರುವ ಘಟನೆ ಸಮೀಪದ ಶಿರೂರು ಗ್ರಾಮದಲ್ಲಿ ನಡೆದಿದೆ. ರೇಣುಕಾ ಮಾದರ ಮೃತ ದುರ್ದೈವಿ. ತೋಗುಣಸಿ ಗ್ರಾಮದ ರೇಣುಕಾ ಎರಡು ದಿನಗಳ ಹಿಂದೆ ಶಿರೂರು ಗ್ರಾಮಕ್ಕೆ ಬಂದಿದ್ದಳು. ರವಿವಾರ ಹೊಲದಲ್ಲಿ ರಾಶಿ ಕೆಲಸ ಮಾಡುವ ವೇಳೆ ಮಶೀನ್‌ಗೆ ಸಿಲುಕಿ ಜೀವ ಬಿಟ್ಟಿದ್ದಾಳೆ. ಈ ಘಟನೆಯನ್ನು ಕಂಡು ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.