ರಾಮುಲು ಆಪ್ತರ ಮನೆ ಮೇಲೆ ಐಟಿ ದಾಳಿ

IT-Raid
Advertisement

ಬಳ್ಳಾರಿ: ಚುನಾವಣೆಗೆ ತಿಂಗಳು ಗಣನೆ ನಡೆಯುತ್ತಿರುವ ಮಧ್ಯೆಯೇ ಆದಾಯ ತೆರಿಗೆ ಇಲಾಖೆ ಸಾರಿಗೆ, ಎಸ್‌ಟಿ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರ ಅಳಿಯ, ಕಂಪ್ಲಿ ಮಾಜಿ ಶಾಸಕ ಸುರೇಶ್‌ಬಾಬು ಆಪ್ತರ ಮೇಲೆ ದಾಳಿ ನಡೆಸಿ ಶಾಕ್ ನೀಡಿದೆ.
ಸುರೇಶ್‌ಬಾಬು ಒಡೆತನದ ಕಾರ್ಖಾನೆ, ಕೈಗಾರಿಕೋದ್ಯಮಿ ಕೈಲಾಸ್ ವ್ಯಾಸ್ ಪಾಲುದಾರಿಕೆಯ ಕಂಪನಿಗಳ ಮೇಲೆ ದಾಳಿ ನಡೆದಿದೆ.
ಬೆಂಗಳೂರು, ಚೆನೈನ ಹದಿನೈದು ಅಧಿಕಾರಿಗಳಿಂದ ಬೆಂಗಳೂರು, ಬಳ್ಳಾರಿ, ಕೊಪ್ಪಳದಲ್ಲಿ ದಾಳಿ ನಡೆಸಲಾಗಿದೆ. ಬಳ್ಳಾರಿಯ ವಿದ್ಯಾನಗರದ ರಾಗಾಸ್ ಪೋರ್ಟ್ ಅಪಾರ್ಟ್ಮೆಂಟ್‌ನಲ್ಲಿ ದಾಖಲೆಗಳ ಪರಿಶೀಲನೆ ಕಾರ್ಯ ನಡೆಯಿತು. ರಾಗಾ ಪೋರ್ಡ್ ಫ್ಲಾಟ್ ನಂಬರ್ ೩೧೦ ಮತ್ತು ೫೧೦ ಪ್ಲಾಟ್‌ನಲ್ಲಿ ಎರಡು ಪ್ರತ್ಯೇಕ ತಂಡಗಳು ಏಕಕಾಲಕ್ಕೆ ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸಿದವು.
ಕೈಲಾಸ್ ವ್ಯಾಸ್, ರಾಮುಲು ಇಬ್ಬರು ಸೇರಿ ಹರಿ ಇಸ್ಪಾತ್ ಕಾರ್ಖಾನೆ ಮಾಡಿದ್ದರಂತೆ. ಈ ಕುರಿತು ದಾಖಲಾತಿಗಳನ್ನು ಅಧಿಕಾರಿಗಳು ತಡಕಾಡಿದ್ದಾರೆ ಎಂದು ತಿಳಿದುಬಂದಿದೆ.
ನೂರಾರು ಕೋಟಿ ಬೆಲೆ ಬಾಳುವ ಫ್ಯಾಕ್ಟರಿ ಖರೀದಿಗೆ ಹಣ ಎಲ್ಲಿಂದ ಬಂತು ಎನ್ನವುದರ ಮಾಹಿತಿ ಕಲೆಹಾಕುತ್ತಿದ್ದಾರೆ. ಮಾಜಿ ಶಾಸಕ ಸುರೇಶ್‌ಬಾಬುಗೆ ಸೇರಿದ ಮಹಾ ಮನವ ವಾಷಿಂಗ್ ಪ್ಲಾಂಟ್, ಕೊಪ್ಪಳದ ಸಿಮ್ಲಾ ಡಾಬ ಬಳಿಯ ವಾಷಿಂಗ್ ಪ್ಲಾಂಟ್, ಬಳ್ಳಾರಿಯ ವೆಂಕಟೇಶ್ವರ, ಶ್ರೀಹರಿ ಮತ್ತು ಪಿಜಿಎಂ ಪ್ಲಾಂಟ್‌ಗಳಲ್ಲಿ ದಾಖಲೆ ಪರಿಶೀಲಿಸಲಾಗಿದೆ.
ಕೈಲಾಸ್ ವ್ಯಾಸ್ ಸಚಿವ ಶ್ರೀರಾಮುಲು ಮಾಜಿ ಶಾಸಕ ಸುರೇಶ್ ಬಾಬು ಅವರು ಲಾಡ್ ಕುಟುಂಬದ ಪ್ಲಾಂಟ್‌ಗಳನ್ನು ಬಾಡಿಗೆ ಹಾಗೂ ಲೀಜ್ ಮೇಲೆ ನಡೆಸುತ್ತಿದ್ದರು. ಈ ಕೈಗಾರಿಕೆಗಳು ತೆರಿಗೆ ವಂಚನೆ ಮಾಡಿದ ಆರೋಪದ ಹಿನ್ನಲೆಯಲ್ಲಿ ದಾಖಲೆ ಪರಿಶೀಲನೆ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.