ರಾಮನಗರ: ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಇದುವರೆಗೂ ರೈತರ ಜಮೀನಿಗೆ ದಾಳಿ ಇಡುತ್ತಿದ್ದ ಒಂಟಿ ಸಲಗವೊಂದು ಶಿವನಹಳ್ಳಿ ಗ್ರಾಮದ ರಸ್ತೆಯ ಮಧ್ಯ ನಿಂತು ಬಸ್ಗೆ ಅಡ್ಡ ಬಂದು ಪ್ರಯಾಣಿಕರನ್ನು ಬೆಚ್ಚಿಬೀಳಿಸಿದ ಘಟನೆ ನಡೆದಿದೆ.
ಕನಕಪುರ ತಾಲೂಕಿನ ಕಾಡು ಶಿವನಹಳ್ಳಿ ಗ್ರಾಮದಿಂದ ಇಂದು ಬೆಳಗ್ಗೆ KSRTC ಬಸ್ಸಿಗೆ ಅಡ್ಡಲಾಗಿ ಬಂದ ಒಂಟಿ ಸಲಗ ಸುಮಾರು ಹೊತ್ತು ರಸ್ತೆಯಲ್ಲಿಯೇ ಅಡ್ಡಲಾಗಿ ನಿಂತಿತ್ತು.ಬಸ್ಸಿನಲ್ಲಿದ್ದ ಪ್ರಯಾಣಿಕರು ಜೋರಾಗಿ ಕಿರುಚಿದ ಪರಿಣಾಮ ಸ್ವಲ್ಪ ಹೊತ್ತು ಹಿಂಭಾಗಕ್ಕೆ ತೆರಳಿ ಮತ್ತೆ ಬಸ್ಸಿನ ಮುಂಭಾಗಕ್ಕೆ ಈ ಒಂಟಿ ಸಲಗ ಬರುತ್ತಿತ್ತು. ನಂತರ ಬಸ್ನ ಹಾರನ್ ಶಬ್ದ ಹೊಡೆದಾಗಲೂ ಕೂಡ ಹಿಂದೆ ಹೋಗುವ ಆನೆ ಮತ್ತೆ ಬಸ್ಸಿನ ಮುಂಭಾಗ ಬಂದಿದೆ.