ರಾಜ್ಯವನ್ನು ಭ್ರಷ್ಟಾಚಾರದಿಂದ ಮುಕ್ತ ಮಾಡುವುದು ನಮ್ಮ ಗುರಿ ; ಡಿ.ಕೆ ಶಿವಕುಮಾರ್

Advertisement

ಬೆಂಗಳೂರು: ದೇಶದಲ್ಲಿ ಶಾಂತಿ-ಸಾಮರಸ್ಯ ಕಾಪಾಡುವುದು. ನಿರುದ್ಯೋಗಿಗಳ ಸಮಸ್ಯೆ ಅರಿಯುವುದು. ರಾಜ್ಯವನ್ನು ಭ್ರಷ್ಟಾಚಾರದಿಂದ ಮುಕ್ತ ಮಾಡುವುದು ನಮ್ಮ ಗುರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಮ್ಮ ರಾಜ್ಯಕ್ಕೆ ಕಳಂಕಿತ ರಾಜ್ಯ ಎನ್ನುವ ಹೆಸರು ಬಂದಿದೆ. ಇದನ್ನು ತಪ್ಪಿಸಲು ಭಾರತ್ ಜೋಡೋ ಯಾತ್ರೆ ಅನುಕೂಲವಾಗಲಿದೆ. ಐಕ್ಯತಾ ಯಾತ್ರೆ ವೇಳೆ ನಿರುದ್ಯೋಗದ ಬಗ್ಗೆ ಚರ್ಚೆ ನಡೆಯಲಿದೆ ಎಂದರು. ಇನ್ನು ಭಾರತ್ ಜೋಡೋ ಪಾದಯಾತ್ರೆ ಈಗಾಗಲೇ ಆರಂಭವಾಗಿದೆ. ರಾಜ್ಯದಲ್ಲಿ ಪಾದಯಾತ್ರೆಗೆ ಎಲ್ಲರೂ ಭಾಗವಹಿಸಬಹುದು. ಯಾರಿಗೆ ಆಸಕ್ತಿ ಇದೆ ಅವರಿಗೆ ಮುಕ್ತ ಅವಕಾಶವಿದೆ. ಭಾಗವಹಿಸುವವರು ರಿಜಿಸ್ಟರ್ ಮಾಡಿಕೊಳ್ಳಬೇಕು. ಡಿಜಿಟಲ್ ಮೂಲಕವೂ ಭಾಗವಹಿಸಬಹುದು ಎಂದರು.