ರಾಜ್ಯಪಾಲ ಗೆಹ್ಲೋಟ್‌ ಕಾರು ಚಾಲಕ ಹೃದಯಾಘಾತದಿಂದ ಸಾವು

Advertisement

ಬೆಂಗಳೂರು : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​​ ಅವರನ್ನು ಏರ್ಪೋರ್ಟ್‌ನಿಂದ ಕರೆದೊಯ್ಯಲು‌ ಬಂದಿದ್ದ ಅವರ ಕಾರು ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ರವಿಕುಮಾರ್ ಎಸ್. ಕಾಳೆ ಮೃತರು. ಹುಬ್ಬಳ್ಳಿಯಿಂದ ತಡರಾತ್ರಿ ವಿಮಾನ ನಿಲ್ದಾಣಕ್ಕೆ ರಾಜ್ಯಪಾಲರು‌ ಆಗಮಿಸಿದ್ದರು. ಅವರನ್ನು ಕರೆದೊಯ್ಯಲು ರವಿಕುಮಾರ್ ಬಂದಿದ್ದರು. ರಾಜ್ಯಪಾಲರು ಏರ್​ಪೋರ್ಟ್​ಗೆ ಬಂದು ವಿಐಪಿ ಲಾಂಜ್​ನಲ್ಲಿರುವಾಗ ಕಾರು ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದೆ. ಹೃದಯಾಘಾತವಾಗಿ ಕಾರಲ್ಲಿಯೇ ಕುಸಿದು ಬಿದ್ದಿದ್ದರು. ತಕ್ಷಣ ಲಾಂಚ್ ಬಳಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಟರ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಮಧ್ಯರಾತ್ರಿ 2:20ರ ವೇಳೆಗೆ ರವಿಕುಮಾರ್ ಕಾಳೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.