ವೆಲ್ಲೂರು: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರು ಅಪರಾಧಿಗಳನ್ನು ಮೂರು ದಶಕಗಳ ಬಳಿಕ
ಜೈಲಿನಿಂದ ಬಿಡುಗಡೆ ಮಾಡಿದ ಬಳಿಕ ಮೂವರು ಆರೋಪಿಗಳಾದ ನಳಿನಿ ಶ್ರೀಹರನ್, ಅವರ ಪತಿ ಮುರುಗನ್ ಮತ್ತು ಸಂತನ್ ಅವರನ್ನು ನಂತರ ಶನಿವಾರ ಸಂಜೆ ಬಿಡುಗಡೆ ಮಾಡಲಾಯಿತು.
31 ವರ್ಷಗಳ ಜೈಲುವಾಸ ಅನುಭವಿಸಿ ತೃಪ್ತಿದಾಯಕ ನಡವಳಿಕೆಯನ್ನು ಅಪರಾಧಿಗಳು ತೋರಿಸಿದ್ದಾರೆ, ಪದವಿಗಳನ್ನು ಪಡೆದಿದ್ದಾರೆ ಜತೆಗೆ ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ಸಮಾಜ ಸೇವೆಯಲ್ಲಿ ಭಾಗವಹಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.