ಹುಬ್ಬಳ್ಳಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ ಎಂಬ ವದಂತಿಗೆ ಜಗದೀಶ ಶೆಟ್ಟರ ತೆರೆ ಎಳೆದಿದ್ದಾರೆ.
ಇಂತಹ ನೂರಾರು ಪತ್ರಗಳು ಹರಿದಾಡುತ್ತವೆ. ಇವಕ್ಕೆಲ್ಲ ತಲೆ ಕೆಡಿಸಿಕೊಳ್ಳಲು ಆಗುವುದಿಲ್ಲ. ಈ ಬಗ್ಗೆ ದೂರನ್ನೂ ದಾಖಲಿಸುವುದಿಲ್ಲ. ರಾಜೀನಾಮೆ ಪತ್ರ ಕನ್ನಡದಲ್ಲಿದೆ. ಹಿರಿಯ ನಾಯಕರಿಗೆ ಪತ್ರ ಬರೆಯೋವಾಗ ಇಂಗ್ಲಿಷ್ನಲ್ಲಿ ಬರೆಯುತ್ತಾರೆ. ರಾಜೀನಾಮೆ ನೀಡುವ ವಿಚಾರ ನನಗಿಲ್ಲ. ತೇಜೋವಧೆ ಮಾಡುವ ಉದ್ದೇಶದಿಂದ ಕಿಡಗೇಡಿಗಳು ಈ ರೀತಿಯ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ಶೆಟ್ಟರ ಸ್ಪಷ್ಟಪಡಿಸಿದ್ದಾರೆ.