ರವೀಂದ್ರನಾಥ್ ನಿಲ್ಲದಿದ್ದರೆ ಸೂಕ್ತ ಅಭ್ಯರ್ಥಿ ಕಣಕ್ಕಿಳಿಸಲಿದ್ದೇವೆ: ಸಂಸದ ಜಿಎಂಎಸ್

GMS
Advertisement

ದಾವಣಗೆರೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರವೀಂದ್ರನಾಥ್ ಅವರೇ ಬಿಜೆಪಿಯಿಂದ ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಸ್ಪರ್ಧಿಸಿದರೆ ಒಳ್ಳೆಯದು. ಅವರು ಸ್ಪರ್ಧೆಗೆ ಒಪ್ಪದಿದ್ದರೆ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸಬೇಕೆಂದು ಕಾಂಗ್ರೆಸ್ ಇನ್ನೂ ಗೊಂದಲದಲ್ಲಿದೆ. ಕಾಂಗ್ರೆಸ್ ಯಾರನ್ನು ನಿಲ್ಲಿಸುತ್ತದೆ ಎಂಬುದರ ಮೇಲೆ ನಮ್ಮ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ ಎಂದರು. ಚುನಾವಣೆಗೆ ಇನ್ನೂ ನಾಲ್ಕೈದು ತಿಂಗಳ ಕಾಲಾವಕಾಶವಿದ್ದು, ಎಸ್.ಎ.ರವೀಂದ್ರನಾಥ್ ಅವರೇ ನಿಲ್ಲಬಹುದು, ಬೇರೆಯವರು ಆಗಬಹುದು ಅಥವಾ ನಾನೇ ನಿಲ್ಲಬಹುದು. ಈ ವಿಚಾರವಾಗಿ ಪಕ್ಷದ ತೀರ್ಮಾನವೇ ಅಂತಿಮ ಎಂದರು.