ರಮೇಶ್ ಜಾರಕಿಹೊಳಿ ಆರೋಪಗಳಿಗೆ ತಿರಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ‘ಅವನಿಗೆ ಪ್ಯಾಂಟ್ ಬಿಚ್ಚಲು ಹೇಳಿದ್ವಾ? ಕಾಂಗ್ರೆಸ್ ಪಕ್ಷ ಹಾಳು ಮಾಡಿದ್ದೇ ಅವನು’ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅವನಿಗೆ ಪ್ಯಾಂಟ್ ಬಿಚ್ಚಲು ನಾನು ಹೇಳಿದ್ನಾ, ಲಂಚ ತೆಗೆದುಕೊಳ್ಳಲು ನಾನು ಹೇಳಿದ್ನಾ, ಜನರ ವೋಟಿಗೆ ಆರು ಸಾವಿರ ನೀಡಲು ನಾನು ಹೇಳಿದ್ನಾ, ಆಪರೇಷನ್ ಕಮಲ ಮಾಡಿ ಕಾಂಗ್ರೆಸ್ ಸರ್ಕಾರ ಬೀಳಿಸಿದ್ದನಲ್ಲಪ್ಪಾ. ಅದೇನೋ ತನಿಖೆ ಮಾಡಿಸ್ತೀನಿ ಅಂದ್ನಲ್ಲಾ ಮಾಡಿಸೋಕೆ ಹೇಳಿ, ಸಿಬಿಐ ತನಿಖೆ ಮಾಡಿಸೋಕೆ ಹೇಳಿ ಅಂತಾ ಡಿಕೆಶಿವಕುಮಾರ್ ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದರು.