ರಬಕವಿ-ಬನಹಟ್ಟಿಯಲ್ಲಿ ಎರಡು ಹೈಟೆಕ್ ಬಸ್ ನಿಲ್ದಾಣ

Rabkavi
Advertisement

ಬಾಗಲಕೋಟೆ ಜಿಲ್ಲೆಯ ರಬಕವಿ ಹಾಗು ಬನಹಟ್ಟಿ ಪಟ್ಟಣಗಳಲ್ಲಿ ಈಗಿರುವ ಬಸ್ ನಿಲ್ದಾಣದಲ್ಲಿ ತಲಾ 1.5 ಕೋಟಿ ವೆಚ್ಚದ ಒಟ್ಟು 3 ಕೋಟಿ ರೂ.ಗಳ ವೆಚ್ಚದಲ್ಲಿ ಎರಡು ಪ್ರತ್ಯೇಕ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗಲಿವೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ರಬಕವಿ-ಬನಹಟ್ಟಿಯಲ್ಲಿ ನೂತನ ಬಸ್ ನಿಲ್ದಾಣ ಕಟ್ಟಡ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹೈಟೆಕ್ ಬಸ್ ನಿಲ್ದಾಣಕ್ಕಾಗಿ ದೊಡ್ಡ ಮೊತ್ತದ ಅನುದಾನ ತಂದಿದ್ದು, ಜನಮೆಚ್ಚುವಂತ ಗುಣಮಟ್ಟದ ಕಾಮಗಾರಿ ಮಾಡುವ ಮೂಲಕ ಅಧಿಕಾರಿಗಳು ಹಾಗು ಗುತ್ತಿಗೆದಾರರು ಅನುದಾನದ ಹಣ ಸಾರ್ಥಕವಾಗುವಂತೆ ಮಾಡಬೇಕೆಂದರು.
ತಾಲೂಕಿಗೆ ಬೇಕಾಗುವ ಎಲ್ಲ ಸರ್ಕಾರಿ ಕಚೇರಿಗಳನ್ನು ಒಂದೊಂದಾಗ ಸ್ಥಾಪಿಸುವ ಉದ್ದೇಶ ಇಟ್ಟುಕೊಂಡಿದ್ದೇವೆ. ಕೆಲವೇ ದಿನಗಳಲ್ಲಿ ಮಿನಿ ವಿಧಾನಸಭಧ ನಿರ್ಮಾಣಕ್ಕೂ ಚಾಲನೆ ದೊರಕಲಿದೆ ಎಂದು ಭರವಸೆ ನೀಡಿದರು.
ತೇರದಾಳ ವಿಧಾನಸಭಾ ಕ್ಷೇತ್ರಾದ್ಯಂತ ರಸ್ತೆ, ಚರಂಡಿ, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಕಾರ್ಯವಾಗಿರುವದು ನೆಮ್ಮದಿ ತಂದಿದೆ ಎಂದರು.