ರಣವೀಳ್ಯ ನೀಡಿದ `ಹಸ್ತ’ ಪಡೆ

ಭಾರತ ಜೋಡೋ
Advertisement

ಬಳ್ಳಾರಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೊ ರಾಜ್ಯ ಪಾದಯಾತ್ರೆಯ ಕೊನೆಯ ಭಾಗವಾಗಿ ಶನಿವಾರ ಇಲ್ಲಿ ನಡೆದ ಬೃಹತ್ ಐಕ್ಯತಾ ಸಮಾವೇಶ, `೪೦ ಪರ್ಸೆಂಟ್ ಸರ್ಕಾರವನ್ನು ಕಿತ್ತೊಗೆಯುತ್ತೇವೆ'' ಎಂಬ ಸಂಕಲ್ಪ ಮಾಡಿತು. ಆಡಳಿತಾರೂಢ ಬಿಜೆಪಿ ವಿರುದ್ಧ ಹಿಂದೆಂದೂ ಇಲ್ಲದಷ್ಟು ಜೋರಾಗಿ ತೊಡೆ ತಟ್ಟಿತು. 2023ರ ವಿಧಾನಸಭೆ ಚುನಾವಣೆಯ ರಣವೀಳ್ಯವನ್ನು ನೀಡಿತು. ಭಾರತ್ ಜೋಡೊ ರಾಜಕೀಯ ಉದ್ದೇಶದ್ದಲ್ಲ ಎಂದು ಸಮಾವೇಶ ಸಾರಿತಾದರೂ ಪರೋಕ್ಷವಾಗಿ ಇದು ಮುಂಬರುವ ವಿಧಾನಸಭೆ ಚುನಾವಣೆಯ ಪೀಠಿಕೆ ಎಂಬುದು ಸ್ಪಷ್ಟವಾಗಿ ಕಾಣುತ್ತಿತ್ತು. ತಾಕತ್ತಿದ್ದರೆ- ದಮ್ಮಿದ್ದರೆ ಪ್ರತಿಪಕ್ಷವನ್ನು ಕಟ್ಟಿ ಹಾಕಿ ಎಂದು ನಾಯಕರು ಬಾಯಿ ಬಿಟ್ಟು ಹೇಳಲಿಲ್ಲ. ಆದರೆ ಸಮಾವೇಶದ ಒಳಭಾವ ಈ ಸವಾಲಿನಿಂದಲೇ ಕೂಡಿತ್ತು. ಬಿಜೆಪಿ ವಿರುದ್ಧ ಒಗ್ಗಟ್ಟಿನ ಪ್ರದರ್ಶನ ಕಂಡು ಬಂತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲ ಪ್ರಮುಖರು ಬಿಜೆಪಿ ವಿರುದ್ಧ ಸಿಂಹ ಗರ್ಜನೆ ಮಾಡಿದರು. ರಾಜ್ಯಕೈ’ ಪಾಳಯದ ಪುನಶ್ಚೇತನಕ್ಕೆ ವೇದಿಕೆ ಸಜ್ಜುಗೊಂಡಿದೆ ಎಂದು ಒಕ್ಕೊರಲಿನಿಂದ ಹೇಳಿದರು.