ಯುಕೆ ಪ್ರಧಾನಿ ಸುನಕ್ ಕುಟುಂಬ ಗೋವಾದಲ್ಲಿ

ರಿಷಿ ಸುನಕ್
Advertisement

ಪಣಜಿ: ಯುಕೆ ಪ್ರಧಾನಿ ಭಾರತೀಯ ಮೂಲದ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಮಕ್ಕಳು ಮತ್ತು ತಾಯಿ ಸುಧಾ ಮೂರ್ತಿ ಹಾಗೂ ತಂದೆ ನಾರಾಯಣ ಮೂರ್ತಿ ಅವರೊಂದಿಗೆ ರಜೆ ಆನಂದಿಸಲು ಗೋವಾಕ್ಕೆ ಆಗಮಿಸಿದ್ದಾರೆ.
ಗೋವಾದ ಬಾಣಾವಲಿ ಕಡಲತೀರದಲ್ಲಿ ಅಕ್ಷತಾ, ಮಕ್ಕಳು ಮತ್ತು ಸುಧಾ ಹಾಗೂ ನಾರಾಯಣ ಮೂರ್ತಿ ಇದ್ದರು. ಸುನಕ್ ಕುಟುಂಬ ಸಮುದ್ರದಲ್ಲಿ ಜೆಟ್ ಸ್ಕೀ ಪ್ರವಾಸ ಕೈಗೊಂಡಿತು.
ಅಕ್ಷತಾ ಮತ್ತು ಗೋವಾದ ಸ್ಥಳೀಯ ಉದ್ಯೋಗಸ್ಥರ ನಡುವೆ ಸಂಭಾಷಣೆ ನಡೆಯಿತು. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗೋವಾ ಮೂಲದ ಪೀಲೆ ಫರ್ನಾಂಡಿಸ್ ಮೀನುಗಾರಿಕೆ, ಜಲ ಕ್ರೀಡೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಪೀಲೆ ಮತ್ತು ಅಕ್ಷತಾ ಮೂರ್ತಿ ನಡುವಿನ ಸಂಭಾಷಣೆ ವೈರಲ್ ಆಗಿದೆ. ಗೋವಾದಲ್ಲಿ ಜೆಟ್ ಸ್ಕೀ ರೈಡ್ ಬಗ್ಗೆ ಅಕ್ಷತಾ ಮೂರ್ತಿ ಪ್ರಶ್ನೆ ಕೇಳಿದ್ದಾರೆ. ಅದಕ್ಕಿಂತ ಹೆಚ್ಚಾಗಿ, ಗೋವಾದಲ್ಲಿ ಇಂತಹ ಜಲ ಕ್ರೀಡೆಗಳು ಸುರಕ್ಷಿತವೇ ಎಂದೂ ಕೇಳಿದರು. 100ರಷ್ಟು ಸುರಕ್ಷಿತ ಎಂದು ಫರ್ನಾಂಡಿಸ್ ಉತ್ತರಿಸಿದರು. ಬೋಟ್‌ನಲ್ಲಿ ನಿಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಬರುವುದಾಗಿ ಗೋವಾದ ಫರ್ನಾಂಡಿಸ್ ಅಕ್ಷತಾಗೆ ಹೇಳಿರುವ ವೀಡಿಯೊ ವೈರಲ್ ಎಲ್ಲೆಡೆ ಹರಿದಾಡುತ್ತಿದೆ.