ಯಾದಗಿರಿ ಪೂರ್ವಜರ ಸಾಮರ್ಥ್ಯದ ಪ್ರತೀಕ: ನರೇಂದ್ರಮೋದಿ

Advertisement

ಯಾದಗಿರಿ :ಯಾದಗಿರಿ ಜಿಲ್ಲೆಗೆ ಸಮೃದ್ಧ ಇತಿಹಾಸವಿದೆ . ನಮ್ಮ ಪೂರ್ವಜರ ಸಾಮರ್ಥ್ಯದ ಪ್ರತೀಕವಾಗಿದೆ . ನಮ್ಮ ಸಂಸ್ಕೃತಿ , ಪರಂಪರೆ ಇದೆ , ಸುರಪುರದ ಮಹಾನ್ ರಾಜ ವೆಂಕಟಪ್ಪ ನಾಯಕ ತಮ್ಮ ಆಡಳಿತದಿಂದ ದೇಶದಲ್ಲಿ ಖ್ಯಾತಿ ಗಳಿಸಿದರು .

ಕರ್ನಾಟಕದ ವಿಕಾಸಕ್ಕಾಗಿ 10 ಸಾವಿರ ಕೋಟಿ ರೂಪಾಯಿಗೂ ಅಧಿಕ ಯೋಜನೆಗೆ ಶಿಲಾನ್ಯಾಸ , ಶಂಕುಸ್ಥಾಪನೆಗೆ ಬಂದಿದ್ದೇನೆ . ಈ ಯೋಜನೆಯಿಂದ ಯಾದಗಿರಿ , ಕಲಬುರಗಿ , ವಿಜಯಪುರ , ರಾಯಚೂರು ಜಿಲ್ಲೆಗಳ ಜನತೆಗೆ ನೀರಾವರಿ , ಕುಡಿಯುವ ನೀರಿಗೆ ಸಾಕಷ್ಟು ಉಪಯೋಗವಾಗಲಿದೆ . ಜನರ ಜೀವನ ಮಟ್ಟ ಸುಧಾರಿಸಲಿದೆ . ಉದ್ಯೋಗ ಪ್ರಮಾಣ ಹೆಚ್ಚಾಗಲಿದೆ . ಒಟ್ಟಾರೆ ಜಿಲ್ಲೆಗಳ ವಿಕಾಸವಾಗಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ .

ಈ ಯೋಜನೆ ಆರಂಭಕ್ಕೆ ನಾನು ಸಿಎಂ ಬೊಮ್ಮಾಯಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳಿಗೆ ಧನ್ಯವಾದ ಹೇಳುತ್ತೇನೆ ಎಂದರು .

ಭಾರತ ಇಂದು ಎಲ್ಲಾ ರಂಗಗಳಲ್ಲಿ ಮುಂಚೂಣಿಯಲ್ಲಿ ಸಾಗುತ್ತಿದೆ . ಮುಂದಿನ 25 ವರ್ಷಗಳಲ್ಲಿ ಭಾರತ ಅಮೃತ ಸಮಯವನ್ನು ಕಾಣಲಿದೆ . ಕರ್ನಾಟಕದ ಕೊಡುಗೆಯೂ ಅದರಲ್ಲಿ ಸಾಕಷ್ಟಿದೆ . ಇದಕ್ಕೆ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದರು.

ಎಲ್ಲ ಸಹೋದರ , ಸಹೋದರಿಯರಿಗೆ ನನ್ನ ವಂದನೆಗಳು ಎಂದು ಕೈ ಮುಗಿದು ಕನ್ನಡದಲ್ಲಿ ಭಾಷಣ ಆರಂಭಿಸಿದರು . ನಾವು ವಿಕಾಸದ ಮೂಲಕ ಜನರ ವೋಟ್ ಬ್ಯಾಂಕ್ ನೋಡುತ್ತೇವೆ ಎಂದರು.