ಕುಷ್ಟಗಿ:ಧರ್ಮ ಮತ್ತು ಆಧ್ಯಾತ್ಮಿಕತೆ ಬದುಕಿಗೆ ಆಶಾಕಿರಣ. ಭೌತಿಕ ಬದುಕಿಗೆ ಆಧ್ಯಾತ್ಮ ಜ್ಞಾನ ಅವಶ್ಯಕ.ಮೌಲ್ಯಾಧಾರಿತ ಜೀವನದಿಂದ ಮನುಷನಿಗೆ ಬೆೆ ಮತ್ತು ಬಲ ದೊರಕುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ತಾಲೂಕಿನ ಚಳಗೇರಾ ಹಿರೇಮಠದ ಲಿಂ.ವಿರುಪಾಕ್ಷಲಿಂಗ ಶ್ರೀಗಳವರ 8ನೇ ವರುಷದ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಮಾನವನನ್ನು ಪರಿಪೂರ್ಣದೆಡೆಗೆ ಕರೆದೊಯ್ಯುವುದೇ ನಿಜವಾದ ಧರ್ಮ. ಸಮಸ್ತ ಜನರ ಭೋಗ ಮೋಕ್ಷಗಳಿಗೆ ಧರ್ಮವೇ ಅಡಿಪಾಯವಾಗಿದೆ. ಮಾನವೀಯ ಸಂಬಂಧಗಳನ್ನು ಬೆಸೆಯುವುದೇ ಧರ್ಮಗಳ ಗುರಿಯಾಗಬೇಕಾಗಿದೆ.ಮಾನವ ಜೀವನಕ್ಕೆ ಧರ್ಮ ಬೇಲಿ ಇದ್ದಂತೆ.ಮನೆಗೆ ಕಂಪೌಂಡ ಇದ್ದ ಹಾಗೆ ಧರ್ಮವಿದೆ.ಅಮರ ಜೀವನ ಪ್ರಾಪ್ತಿಗಾಗಿ ಗುರು ಕಾರುಣ್ಯ ಅವಶ್ಯಕ. ಮನದ ಅಜ್ಞಾನ ಎಂಬ ಕತ್ತಲೆ ಕಳೆಯಲು ಗುರು ಎಂಬ ಸೂರ್ಯ ಬೇಕೇ ಬೇಕು
ಎಂದರು.
ಲಿಂ. ವಿರುಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ಭಕ್ತ ಸಂಕುಲಕ್ಕೆ ಆದರ್ಶ ಗುರುವಾಗಿ ಸಂಸ್ಕಾರ ನೀಡಿದ್ದನ್ನು ಮರೆಯಗದು.ಸರಳತೆ ಮತ್ತು ಸಾತ್ವಿಕತೆ ಮೈಗೂಡಿಕೊಂಡು ಬಾಳಿದ ಶ್ರೀಗಳು ಭಕ್ತರ ಸಂಕಷ್ಟಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದನ್ನು ಮರೆಯಲಾಗದು. ಅವರ ಆದರ್ಶ ಧರ್ಮ ದಾರಿಯಲ್ಲಿ ವೀರ ಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮುನ್ನಡೆದು ಧರ್ಮ ಸಂಸ್ಕೃತಿ ಬೆಳೆಸುತ್ತಿರುವ ಮತ್ತು ಶ್ರೀ ಮಠವನ್ನು ಅಭಿವೃದ್ಧಿಪಡಿಸುತ್ತಿರುವುದು ತಮಗೆ ಸಂತೋಷ ತಂದಿದೆ ಲಿಂ. ವಿರುಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳ ಸತ್ಯ ಸಂಕಲ್ಪಗಳು ಸಾಕಾರಗೊಳ್ಳಲಿ ಎಂದು ಶುಭ ಹಾರೈಸಿದರು.
ನೇತೃತ್ವ ವಹಿಸಿದ ಚಳಗೇರಾ ಹಿರೇಮಠದ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸುಖ ಶಾಂತಿದಾಯಕ ಬದುಕಿಗೆ ಧರ್ಮವೇ ಅಡಿಪಾಯ.ಸಂಪತ್ತು ಬೆಳೆದಂತೆ ಸಂಸ್ಕೃತಿ ಬೆಳೆದುಕೊಂಡು ಬರಬೇಕು. ಆದರ್ಶ ಮೌಲ್ಯಗಳ ಸಂಗಮ ವೀರಶೈವ ಧರ್ಮವಾಗಿದೆ. ಲಿಂ. ವಿರುಪಾಕ್ಷಲಿಂಗ ಶ್ರೀಗಳವರ ಬಾಳ ಬದುಕು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದರು.
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು.
ವಿರಯ್ಯ ಹಿರೇಮಠ ಕೆಸರಟ್ಟಿ, ಲಾಡ್ಲೇಮಷಾಕ ದೋಟಿಹಾಳ ಯಲಬುರ್ಗಿ, ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ರುದ್ರಮುನಿ ಮಹಾಸ್ವಾಮಿಗಳು, ವಾಸುದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು, ಸರ್ವಭೂಚಣ ಮಹಾಸ್ವಾಮಿಗಳು, ಜಯಶಾಂತಲಿಂಗ ಮಹಾಸ್ವಾಮಿಗಳು, ಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು ಸರ್ವ ಲಿಂಗೇಶ್ವರಮಠ, ಹಬ್ಬ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳ, ಒಪ್ಪಶ್ವೇಶ್ವರ ಮಹಾಸ್ವಾಮಿ, ಸೇರಿದಂತೆ ಅನೇಕರು ಇದ್ದರು.