ಮೋದಿ, ಅಮಿತ್ ಶಾ ಸುದರ್ಶನ ಚಕ್ರ ಹಿಡಿದು ಬಂದ್ರು ಬಿಜೆಪಿ ಅಧಿಕಾರಕ್ಕೆ ಬರಲ್ಲ: ಕುಮಾರಸ್ವಾಮಿ

Advertisement

ಹುಬ್ಬಳ್ಳಿ : ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಪ್ರಧಾನಿ ಮೋದಿ, ಅಮಿತ್ ಶಾ ರಾಜ್ಯಕ್ಜೆ ಪದೇ ಪದೇ ಬರುತ್ತಿದ್ದಾರೆ. ಅವರು ಸುದರ್ಶನ ಚಕ್ರ ಹಿಡಿದು ಬಂದರೂ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಬೈಲಹೊಂಗಲಕ್ಕೆ ಪಂಚರತ್ನ ಯಾತ್ರೆಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರಲ್ಲ. ಜೆಡಿಎಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದರು.
ಮುಖ್ಯಮಂತ್ರಿ, ರಾಜ್ಯದ ಬಿಜೆಪಿ ನಾಯಕರಿಗೆ ಜನರ ಬಳಿ ಹೋಗಲಯ ಮುಖವಿಲ್ಲ. ಏನೂ ಕೆಲಸ ಮಾಡಿಲ್ಲ. ಅದಕ್ಕಾಗಿ ಪದೇ ಪದೇ ಮೋದಿ, ಅಮಿತ್ ಶಾ ಕರೆಸುತ್ತಿದ್ದಾರೆ. ಮೋದಿ, ಶಾ ಬಂದಯ ಸುತ್ತಾಡಿದರೆ ಬಿಜೆಪಿ ಅಧಿಕಾರಕ್ಕೆ ಬಂದು ಬಿಡುತ್ತದೆಯೇ? ಸಾಧ್ಯವೇ ಇಲ್ಲ ಎಂದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಾನಲ್ಲ. ಸುಳ್ಳಿನ ಸಿದ್ದರಾಮಯ್ಯನೇ ಕಾರಣ ಎಂದು ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಅಂತಹ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಸಂದರ್ಭಕ್ಜೆ ಕಾರಣರಾದವರೂ ಸಿದ್ದರಾಮಯ್ಯ. ಅಷ್ಟೇದ ಅಲ್ಲ . ಕಳೆದ ಬಾರಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸಲು ಸುಳ್ಳಿನ ಸಿದ್ದರಾಮಯ್ಯನೇ ಕಾರಣ. ಸಿದ್ದವನದಲ್ಲಿ ಕುಳಿತು ಮೂರು ತಿಂಗಳಷ್ಟೇ ಸರ್ಕಾರ ಎಂದು ಹೇಳಿಕೆ ನೀಡಿ, ಐದು ಮಂದಿ ಶಾಸಕರು ಪಕ್ಷ ಬಿಟ್ಟು ಹೋಗಲು ಕಾರಣರಾದವರು ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದರು.
ಮಹದಾಯಿ ನದಿ ನೀರಿನ ವಿಚಾರದಲ್ಲಿ ಬಿಜೆಪಿ ಸರ್ಕಾರ ಏನೂ ಮಾಡಿಲ್ಲ. ಡಬಲ್ ಎಂಜಿನ್ ಸರ್ಕಾರವಲ್ಲ.ತ್ರಿಬಲ್ ಎಂಜಿನ್ ಸರ್ಕಾರ. ಕೇಂದ್ರದಲ್ಲು ಬಿಜೆಪಿ, ರಾಜ್ಯದಲ್ಲೂ ಬಿಜೆಪಿ, ಗೋವಾದಲ್ಲು ಬಿಜೆಪಿ. ಮಹಾದಾಯಿಗೆ ಯೋಜನೆ ಜಾರಿ ಸಾಧ್ಯವಾಯಿತೇ? 2014 ರಿಂದಲೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಯಾಕೆ ಜಾರಿ ಮಾಡಲು ಸಾಧ್ಯವಾಗಿಲ್ಲ ಎಂದರು.
ಬರೀ ಬಿಜೆಪಿ ಅಷ್ಟೇ ಅಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಮಹದಾಯಿ ಉಪೇಕ್ಷೆ ಮಾಡಲಾಗಿತ್ತುಮ ಎಂ.ಬಿ ಪಾಟೀಲ್ ನೀರಾವರಿ ಸಚಿವರಾಗಿದ್ದರು ಏನೂ ಮಾಡಲಿಲ್ಲ. ಈಗ ಕಾರಜೋಳ ಅವರು ನೀರಾವರಿ ಸಚಿವರಾಗಿದ್ದಾರೆ. ಯಾಕೆ ಮಾಡಲು ಆಗಿಲ್ಲ. ಕೇಂದ್ರ ಸರ್ಕಾರದತ್ತ ಯಾಕೆ ಬೊಟ್ಟು ಮಾಡಿಕೊಂಡು ಕುಳಿತಿದ್ದಾರೆ. ಕೇಂದ್ರದ ನಾಯಕರಿಗೆ ಹೇಳಿ ಏಕೆ ಕೆಲಸ ಮಾಡಿಸಲು ಅಗುತ್ತಿಲ್ಲ ಎಂದು ಪ್ರಶ್ನಿಸಿದರು.

ನಾನು ಬ್ರಾಹ್ಮಣ ವಿರೋಧಿ ಅಲ್ಲ
ನಾನು ಬ್ರಾಹ್ಮಣ ವಿರೋಧಿ ಅಲ್ಲ. ಬ್ರಾಹ್ಮಣರ ನಡುವೆ ಬೆಳೆದು ಬಂದವ ನಾನು. ನಮ್ಮ ಕುಟುಂಬ ಬ್ರಾಹ್ಮಣರಿಗೆ ಗೌರವ ಕೊಟ್ಟುಕೊಂಡು ಬಂದಿರುವ ಕುಟುಂಬ. ನಾನು ಹೇಳಿದ್ದು ಪೇಶ್ವೆ ಡಿಎನ್ಎ ಬಗ್ಗೆ. ಅಶಾಂತಿಯ ವಾತಾವರಣ ಸೃಷ್ಟಿಸುವ ಪೇಶ್ವೆ ಡಿ ಎನ್ಎಎದವರು ಮುಖ್ಯಮಂತ್ರಿ ಆಗಲು ಅವಕಾಶ ಕೊಡಬೇಡಿ ಎಂದು ಹೇಳಿದ್ದೇನೆ. ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಬೇಕೊ, ಪೇಶ್ವೆ ಡಿಎನ್ಎ ದವರು ಮುಖ್ಯಮಂತ್ರಿಯಾಗಿ ರಾಜ್ಯವನ್ನ ಅಶಾಂತಿಯ ತೋಟವಾಗುವುದು ಬೇಕೊ ಎಂಬುದನ್ನು ರಾಜ್ಯದ ಜನ ನಿರ್ಧರಿಸಲಿ ಎಂದರು.