ದೆಹಲಿ: ಇಡೀ ಭಾರತ ದೇಶವು ಪ್ರಧಾನಿ ಮೋದಿಯವರ ಭರವಸೆಯಲ್ಲಿ ನಂಬಿಕೆ ಇಟ್ಟಿದೆ. ದೇಶವನ್ನು ಅಭಿವೃದ್ಧಿಪಡಿಸುವ ಪ್ರಧಾನಿ ಮೋದಿಯವರ ಸಂಕಲ್ಪವನ್ನು ಬೆಂಬಲಿಸುತ್ತದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿರುವ ಹಿನ್ನೆಲೆ ಮಾತನಾಡಿರುವ ಅವರು, ಬಿಜೆಪಿಯು ಮಧ್ಯಪ್ರದೇಶವನ್ನು ಮತ್ತೊಮ್ಮೆ ಸ್ವೀಪ್ ಮಾಡಲು ಸಜ್ಜಾಗಿದೆ, ಮುಂದಿನ ವರ್ಷ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಮಧ್ಯ ಪ್ರದೇಶದ ಭಾರೀ ಬಹುಮತ ಸಾಧಿಸುತ್ತದೆ ಎಂದರು. ಅಲ್ಲದೇ ಇಂದಿನ ಫಲಿತಾಂಶಗಳು ಪ್ರಧಾನಿ ಮೋದಿಯವರ ಮೇಲೆ ಇಟ್ಟಿರುವ ನಂಬಿಯನ್ನು ಸ್ಪಷ್ಟವಾಗಿ ತೋರಿಸುತ್ತವೆ ಎಂದಿದ್ದಾರೆ.