ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಜೋಡೋ ಕೆಲಸವಾಗಲಿ. ಪಕ್ಷದಲ್ಲಿಯೇ ಹುಳುಕು ಇಟ್ಟುಕೊಂಡು, ದೇಶವನ್ನು ಒಂದು ಮಾಡುತ್ತೀನಿ ಎಂದು ಹೊರಟಿರುವುದು ದೇಶದ ಜನರ ಮುಂದೆ ನಗೆಪಾಟಲಿಗೀಡಾಗಿದ್ದೀರಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್, ರಾಜಸ್ಥಾನದಲ್ಲಿ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ಅವರನ್ನು ಒಂದು ಮಾಡಿ ಎಂದಿದ್ದಾರೆ. ಅಲ್ಲದೇ ಮೂರು ವರ್ಷಗಳಿಂದ ಅಧ್ಯಕ್ಷರನ್ನೇ ನೇಮಕ ಮಾಡಿಕೊಳ್ಳಲು ನಿಮ್ಮಿಂದ ಆಗಲಿಲ್ಲ ಅಂದರೆ ಇನ್ನು ದೇಶವನ್ನ ಹೇಗೆ ನಡೆಸುತ್ತೀರಿ ಎಂದು ಪ್ರಶ್ನಿಸಿದರು.