ಬೆಂಗಳೂರು : ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಇನ್ನು ವಾಹನ ಸವಾರರು ಸುಂಕ ಕಟ್ಟಿಯೇ ಸಂಚರಿಸಬೇಕು. ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮೊದಲ ಸುಂಕ ವಸೂಲಿ ಕೇಂದ್ರ ಮಂಗಳವಾರದಿಂದ ಆರಂಭವಾಗಲಿದೆ. ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ದರವನ್ನು ನಿಗದಿ ಪಡಿಸಿ ಕೇಂದ್ರ ಹೆದ್ದಾರಿ ಪ್ರಾಧಿಕಾರದಿಂದ ಪ್ರಕಟಣೆ ನೀಡಿದೆ
ಕಾರು, ಜೀಪು, ವ್ಯಾನುಗಳಿಗೆ: ಏಕಮುಖ ಸಂಚಾರಕ್ಕೆ 135 ರೂ. ಅದೇ ದಿನ ಮರು ಸಂಚಾರಕ್ಕೆ 205 ರೂ. ಸ್ಥಳೀಯ ವಾಹನಗಳಿಗೆ 70 ರೂ. ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 4,525 ರೂ.
ಲಘು ವಾಣಿಜ್ಯ ವಾಹನಗಳು/ಲಘು ಸರಕು ವಾಹನಗಳು/ಮಿನಿ ಬಸ್‌ಗಳಿಗೆ: ಏಕಮುಖ ಸಂಚಾರಕ್ಕೆ 220ರೂ. ಅದೇ ದಿನ ಮರು ಸಂಚಾರಕ್ಕೆ 320 ರೂ. ಸ್ಥಳೀಯ ವಾಹನಗಳಿಗೆ 110 ರೂ., ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 7315 ರೂ.
ಬಸ್ ಅಥವಾ ಟ್ರಕ್(ಎರಡು ಆಕ್ಸೆಲ್): ಏಕಮುಖ ಸಂಚಾರಕ್ಕೆ 460ರೂ. ಅದೇ ದಿನ ಮರು ಸಂಚಾರಕ್ಕೆ 690 ರೂ. ಸ್ಥಳೀಯ ವಾಹನಗಳಿಗೆ 230ರೂ., ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 15,325 ರೂ.
ವಾಣಿಜ್ಯ ವಾಹನಗಳು (ಮೂರು ಆಲ್ಸೆಲ್): ಏಕಮುಖ ಸಂಚಾರಕ್ಕೆ 500 ರೂ. ಅದೇ ದಿನ ಮರು ಸಂಚಾರಕ್ಕೆ 750 ರೂ. ಸ್ಥಳೀಯ ವಾಹನಗಳಿಗೆ 250ರೂ. ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 16,715 ರೂ.
ಭಾರಿ ನಿರ್ಮಾಣ ಯಂತ್ರ, ಭೂ ಅಗೆತ ಸಾಧನ್, ಬಹು ಆಕ್ಸೆಲ್ ವಾಹನ (6 ಆಕ್ಸೆಲ್): ಏಕಮುಖ ಸಂಚಾರಕ್ಕೆ 720ರೂ. ಅದೇ ದಿನ ಮರು ಸಂಚಾರಕ್ಕೆ 1080 ರೂ. ಸ್ಥಳೀಯ ವಾಹನಗಳಿಗೆ 360ರೂ, ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 24,030 ರೂ.
ಅತೀ ಗಾತ್ರದ ವಾಹನಗಳು (7ರಿಂದ ಹೆಚ್ಚಿನ ಆಕ್ಸೆಲ್): ಏಕಮುಖ ಸಂಚಾರಕ್ಕೆ 880ರೂ. ಅದೇ ದಿನ ಮರು ಸಂಚಾರಕ್ಕೆ 1315ರೂ. ಸ್ಥಳೀಯ ವಾಹನಗಳಿಗೆ 440 ರೂ., ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 29,255 ರೂ.