ಮೈಸೂರಿನಲ್ಲಿ ಪ್ರಧಾನಿ ಮೋದಿ ಸಹೋದರ ಕಾರು ಅಪಘಾತ

MODI CAR
Advertisement

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ದಾಮೋದರ ಮೋದಿ ಅವರ ಕಾರು ಮೈಸೂರು ಸಮೀಪ ಕಡಕೊಳ ಬಳಿ ಡಿವೈಡರ್ ಗೆ ಡಿಕ್ಕಿ. ಇಂದು ಮಧ್ಯಾಹ್ನ ಮೋದಿ ಸಹೋದರ ಕುಟುಂಬ ಮೈಸೂರು ಕಡೆಯಿಂದ ಬಂಡೀಪುರಕ್ಕೆ ಕಾರಿನಲ್ಲಿ ತೆರಳುವಾಗ ಚಾಲಕ‌ನ ನಿಯಂತ್ರಣ ತಪ್ಪಿ ಕಡಕೊಳದ ಬಳಿ ರೋಡ್ ಡಿವೈಡರ್‌ಗೆ ಬೆನ್ಜ್ ಕಾರು ಡಿಕ್ಕಿ. ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ದಾಮೋದರ್ ಮೋದಿ , ಪ್ರಹ್ಲಾದ್ ಮೋದಿ ಪುತ್ರ ಮೆಹೂಲ್ ಪ್ರಹ್ಲಾದ್ ಮೋದಿ , ಸೊಸೆ ಜಿಂದಾಲ್ ಮೋದಿ ಹಾಗೂ ಮೊಮ್ಮಗ ಮಾಸ್ಟರ್ ಮೆಹತ್ ಮೆಹೋಲ್‌ ಮೋದಿ ಹಾಗೂ ಕಾರು ಚಾಲಕ ಸತ್ಯನಾರಾಯಣ ಚಾಲಕ ಬಂಡೀಪುರಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದ ಮೈಸೂರು ಎಸ್​ಪಿ ಸೀಮಾ ಲಾಟ್ಕರ್, ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ಮುಖ್ಯಮಂತ್ರಿಯವರ ಕಾರ್ಯಾಲಯಕ್ಕೆ ಮಾಹಿತಿ ನೀಡಿದ್ದಾರೆ.