ಮೈಸೂರಿನಲ್ಲಿ ಟೂರಿಸಂ ಸರ್ಕಿಟ್: ಸಿಎಂ

ಟೂರಿಸಂ ಸರ್ಕಿಟ್
Advertisement

ಮೈಸೂರು: ಪ್ರವಾಸೋದ್ಯಮಕ್ಕೆ ಸರ್ಕಾರ ಉತ್ತೇಜನ ನೀಡಿದ್ದು ಮೈಸೂರು ಪ್ರವಾಸೋದ್ಯಮ ಸರ್ಕಿಟ್ ಶೀಘ್ರವೇ ಕಾರ್ಯರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅರಮನೆ ಆವರಣದ ಬಲರಾಮ ದ್ವಾರದ ಬಳಿ ನಂದಿಧ್ವಜ ಪೂಜೆಯನ್ನು ನೆರವೇರಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು, ಹಳೇಬೀಡು, ಬೇಲೂರು ಸೋಮನಾಥಪುರ ಸೇರಿದಂತೆ ಹಲವು ಪ್ರಮುಖ ಸ್ಥಳಗಳನ್ನು ಒಳಗೊಂಡಿದೆ. ವೆಬ್‌ಸೈಟ್‌ನಲ್ಲಿ ಬುಕ್ ಮಾಡುವ ಸೌಲಭ್ಯವಿರಲಿದೆ ಎಂದರು.
ಉತ್ತರದಲ್ಲಿ ಹಂಪಿ, ದಕ್ಷಿಣದಲ್ಲಿ ಮೈಸೂರು ದಸರಾವನ್ನ ಟೂರಿಸ್ಟ್‌ ಸರ್ಕಿಟ್‌ನ್ನು ಅರ್ಥಪೂರ್ಣವಾಗಿ ಮಾಡಲಾಗುತ್ತಿದೆ. ಇದರ ಅನುಭವದ ಆಧಾರದ ಮೇಲೆ ಸೂಕ್ತ ರೂಪುರೇಷೆಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ವಿಜಯದಶಮಿಯ ದಿನವಾದ ಬುಧವಾರ ಬೆಳಿಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಶಾಸಕರಾದ ಎಸ್.ಎ.ರಾಮದಾಸ್, ಎಲ್. ನಾಗೇಂದ್ರ, ಜಿ.ಟಿ.ದೇವೇಗೌಡ, ಮೇಯರ್ ಶಿವಕುಮಾರ್ ಉಪಸ್ಥಿತರಿದ್ದರು. ಉತ್ಸವ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಬೆಟ್ಟದ ತಳಭಾಗದ ರಸ್ತೆಯ ಎರಡುಬದಿ ಭಕ್ತಸಮೂಹವೇ ನೆರೆದಿತ್ತು.