ಮೈನವಿರೇಳಿಸುವ ಮಲ್ಲಕಂಬ ಪ್ರದರ್ಶನ

ಮಲ್ಲಕಂಬ
Advertisement

ಹುಬ್ಬಳ್ಳಿ: ಇವರನ್ನು ನೋಡಿದರೆ ಜೇನುಗೂಡು ನೋಡಿದಂತೆ… ಬಲಾಬಲ ಪ್ರದರ್ಶನಕ್ಕೆ ನಿಂತರೆ ಜಗ್ಗುವವರಲ್ಲ…
ಇದು ಗುರುವಾರದಿಂದ ಅವಳಿನಗರದಲ್ಲಿ ನಡೆಯುವ ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲು ಬಂದಿರುವ ಮಧ್ಯಪ್ರದೇಶದ ಉಜ್ಜಯನಿಯ ಲೋಕಮಾನ್ಯ ತಿಲಕ್ ಸಾಂಸ್ಕೃತಿಕ ಮತ್ತು ಮಲ್ಲಕಂಬ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಮಲ್ಲಕಂಬ ಪ್ರದರ್ಶನ ಕಂಡವರು ಹೇಳುವ ಮಾತು.
ತರಬೇತುದಾರ ಮುಜಾಹಿದ್ ಅವರ ನೇತೃತ್ವದಲ್ಲಿ ಯುವಜನೋತ್ಸವಕ್ಕೆ ಬಂದಿರುವ ತಂಡವು ಗುರುವಾರ ಸಂಜೆ ಯುವಜನೋತ್ಸವ ಉದ್ಘಾಟಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಮಲ್ಲಕಂಬ ಪ್ರದರ್ಶನ ಮಾಡಲಿದೆ. 5 ವರ್ಷದಿಂದ ಹಿಡಿದು 25 ವರ್ಷದೊಳಗಿನ 17 ಜನರ ತಂಡ ಇದಾಗಿದ್ದು, ಮಲ್ಲಕಂಬದಲ್ಲಿ ವಿವಿಧ ಪ್ರದರ್ಶನ ಮೈನವಿರೇಳಿಸುವಂತಿವೆ.
ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ, ಬೃಹತ್ ವೇದಿಕೆಗಳಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಮಲ್ಲಕಂಬ ಪ್ರದರ್ಶಿಸಿದ್ದಾರೆ. ಹಲವಾರು ರಾಷ್ಟ್ರೀಯ ಮಟ್ಟದ ಷೋಗಳಲ್ಲಿ ಪ್ರತಿಭೆ ಪ್ರದರ್ಶಿಸಿದ್ದಾರೆ ಎಂದು ತರಬೇತಿದಾರ ಮುಜಾಹಿದ್ ಸಂಯುಕ್ತ ಕರ್ನಾಟಕಕ್ಕೆ ತಿಳಿಸಿದರು.
ನಾಳೆ ಸಂಜೆ 4.30ಕ್ಕೆ ಈ ತಂಡ ಪ್ರಧಾನಿ ಮುಂದೆ ಮಲ್ಲಕಂಬ ಪ್ರದರ್ಶಿಸಿದ್ದು, ಇದಕ್ಕಾಗಿ ಇಂದು ಬೆಳಗ್ಗೆ ತಾಲೀಮು ನಡೆಸಿತ್ತು. ಪುನಃ 8.30 ಮತ್ತೆ ತಾಲೀಮು ನಡೆಸಿತು. ಈ ತಾಲೀಮು ಕಂಡವರು ಹುಬ್ಬೇರಿಸಿ ಚಪ್ಪಾಳೆ ತಟ್ಟಿದರು.