ಮೈದಾನಕ್ಕೆ ನುಗ್ಗಿ ಕ್ರಿಕೆಟ್ ಆಟಗಾರರ ಕೊಲೆ: ಶಿಂದೊಳ್ಳಿಯಲ್ಲಿ ಡಬಲ್ ಮರ್ಡರ್

Advertisement

ಬೆಳಗಾವಿ: ಬೆಳಗಾವಿ ಹೊರ ವಲಯ ಶಿಂದೊಳ್ಳಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಡಬಲ್ ಮರ್ಡರ್ ಆಗಿದ್ದು ಜನ ಬೆಚ್ಚಿಬೀಳುವಂತಾಗಿದೆ.
ಬಸವರಾಜ್ ಬೆಳಗಾಂವ್ಕರ್ (22), ಗಿರೀಶ ನಾಗಣ್ಣವರ (22) ಹತ್ಯೆ ಆದವರು,
ಗ್ರಾಮದ ಸರ್ಕಾರಿ ಶಾಲೆಯ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಯುವಕರು‌‌ ಆಡುತ್ತಿದ್ದರು ಈ ವೇಳೆ ಮೈದಾನಕ್ಕೆ ಅಪರಿಚಿತ ವಾಹನ ಏಕಾಎಕಿ ನುಗ್ಗಿಸಿದವನನ್ನು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರು ಬೈದು, ಆಕ್ಷೇಪ ವ್ಯಕ್ತಪಡಿಸಿದ್ದೇ ಕೊಲೆಗೆ ಕಾರಣ ಎನ್ನಲಾಗಿದೆ. ‌
ಯುವಕರ ಮಾತಿಗೆ ಸಿಟ್ಟಾದ ವಾಹನ ಚಾಲಕ, ವಾಹನದಿಂದ ಕೆಳಗಿಳಿದು ಚಾಕುವಿನಿಂದ ಕೊಚ್ಚಿ ಯುವಕರಿಬ್ಬರ ಬರ್ಬರ ಹತ್ಯೆ ಮಾಡಿರುವುದಾಗಿ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಮೃತದೇಹಗಳು ಬಿಮ್ಸ್‌ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.‌ ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾಡಿ, ಎಸಿಪಿ ನಾರಾಯಣ ಬರಮನಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಕೆಎಸ್ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ‌
ಶಿಂಧೊಳ್ಳಿಯಲ್ಲಿ ಬಿಗುವಿನ ವಾತಾವರಣವಿದ್ದು, ಕ್ರಿಕೆಟ್ ಆಟವಾಡುತ್ತಿದ್ದ ಅಮಾಯಕರ ಮೇಲೆ ಚಾಕು ತಿವಿದು ಕೊಲೆ ನಡೆಸಿದ ವ್ಯಕ್ತಿ ಬಂಧಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.