ಬೆಳಗಾವಿ: ವಿಧಾನ ಪರಿಷತ್ ಉಪ ಸಭಾಪತಿ ಸ್ಥಾನಕ್ಕೆ ಬಿಜೆಪಿಯ ಎಂ.ಕೆ. ಪ್ರಾಣೇಶ ಮತ್ತೊಮ್ಮೆ ಆಯ್ಕೆಯಾಗುವುದು ಖಚಿತವಾಗಿದೆ.
ಶುಕ್ರವಾರ ಬೆಳಿಗ್ಗೆ ಉಪ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಪ್ರಾಣೇಶ ಹಾಗೂ ಕಾಂಗ್ರೆಸ್ ಪಕ್ಷದಿಂದ ಅರವಿಂದ ಕುಮಾರ್ ಅರಳಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ ನಿಂದ ಯಾರೂ ಸಲ್ಲಿಸಿಲ್ಲ.
75 ಸದಸ್ಯ ಬಲದ ಪರಿಷತ್ ನಲ್ಲಿ ಬಿಜೆಪಿ 39 ಸದಸ್ಯರನ್ನು ಹೊಂದಿರುವುದರಿಂದ ಪ್ರಾಣೇಶ ಅವರ ಆಯ್ಕೆ ಖಚಿತವಾಗಿದೆ. ಪ್ರಾಣೇಶ ಈ ಮೊದಲು ಕೂಡಾ ಉಪ ಸಭಾಪತಿಯಾಗಿದ್ದರು.