ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಅವರು ಸಹಕಾರ ಸಚಿವಾಲಯವನ್ನು ರಚಿಸುವ ಮೂಲಕ ರೈತರ ಬಹುದಿನದ ಬೇಡಿಕೆ ಪೂರೈಸಿದ್ದಾರೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಷಾ ಅಮಿತ್ ಷಾ ಹೇಳಿದರು, ಮೂರು ದಿನಗಳ ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಷಾ ಅವರು ಮಂಡ್ಯ ಜಿಲ್ಲೆ ಗೆಜ್ಜಲಗೆರೆಯಲ್ಲಿಂದು ಮೆಗಾ ಡೇರಿ ಉದ್ಘಾಟಿಸಿದರು.
ಮೆಗಾ ಡೇರಿ ಉದ್ಘಾಟಿಸಿ ಮಾತನಾಡಿದ ಅವರು ಗೆಜ್ಜಲಗೆರೆಯಲ್ಲಿ 260 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮೆಗಾ ಡೇರಿ, ಹಾಲು ಸಂಸ್ಕರಣೆ, ಹಾಲುಪುಡಿ ತಯಾರಿಕಾ ಘಟಕ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಹೊಂದಿದೆ.
ಬಳಿಕ ಅಮಿತ್ ಷಾ, ಹಾಲು ಉತ್ಪಾದನೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಹೈನೋದ್ಯಮ ಸಹಕಾರ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ವಾತಂತ್ರದ ಬಳಿಕ ದೇಶದಲ್ಲಿ ಪ್ರತ್ಯೇಕ ಸಹಕಾರ ಸಚಿವಾಲಯಕ್ಕೆ ಬೇಡಿಕೆಯಿತ್ತು. ಆಗಲೇ ಸಹಕಾರ ಸಚಿವಾಲಯ ರಚನೆಯಾಗಿದ್ದರೆ ಸಹಕಾರ ಸದಸ್ಯರ ಹಾಗೂ ರೈತರ ಸ್ಥಿತಿಗತಿ ಉತ್ತಮವಾಗಿರುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಸಹಕಾರ ಸಚಿವಾಲಯವನ್ನು ರಚಿಸುವ ಮೂಲಕ ರೈತರ ಬಹುದಿನದ ಬೇಡಿಕೆ ಪೂರೈಸಿದ್ದಾರೆ ಎಂದರು.