ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ ಬಳಿ ಇರುವ ಪುಟ್ಬಾಲ್ ಮೈದಾನದ ಬಳಿ ಮಂಗಳವಾರ ಸಂಜೆ ಮೃತದೇಹ ಪತ್ತೆಯಾಗಿದ್ದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಬಂಟ್ವಾಳ ಅಮ್ಮುಂಜೆಯ ಜನಾರ್ದನ ಪೂಜಾರಿ(45) ಮೃತಪಟ್ಟವರು. ಮೃತ ವ್ಯಕ್ತಿ ಕಾರು ಚಾಲಕರಾಗಿದ್ದರು. ಪುಟ್ಬಾಲ್ ಮೈದಾನದ ಬಳಿ ಮಲಗಿದ್ದಾಗ ಇವರ ಬಳಿ ಇದ್ದ ಮೊಬೈಲ್ ಕಳವು ಮಾಡಲು ಬಂದಿದ್ದವರ ಜತೆ ಘರ್ಷಣೆ ವೇಳೆ ಮೃತಪಟ್ಟರು ಎನ್ನಲಾಗಿದೆ. ಘಟನೆ ಹಿನ್ನೆಲೆಯಲ್ಲಿ ನಾಲ್ವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಲಗಿದೆ. ತನಿಖೆ ಮುಂದುವರೆದಿದೆ.