ಮೂವರ ಬಾಳಿಗೆ ಬೆಳಕಾದ ಯುವಕ

ಅಂಗಾಂಗ ದಾನ
Advertisement

ರಸ್ತೆ ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದು ತೀವ್ರವಾಗಿ ಗಾಯಗೊಂಡು ಧಾರವಾಡದ ಎಸ್‌ಡಿಎಂ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಮೆದಳು ನಿಷ್ಕ್ರೀಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ 39 ವರ್ಷದ ಯುವಕ ತನ್ನ ಅಂಗಾಂಗಳನ್ನು ದಾನ ಮಾಡಿ ಒಬ್ಬರಿಗೆ ಜೀವದಾನ ನೀಡಿದರೆ, ಇಬ್ಬರು ಅಂದರಿಗೆ ಬೆಳಕಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಹೃದಯವನ್ನು ಹಾಗೂ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗೆ ಕಸಿ ಮಾಡಲು ಗ್ರೀನ್‌ ಕಾರಿಡಾರ ಮೂಲಕ ಧಾರವಾಡದಿಂದ ರಸ್ತೆ ಮಾರ್ಗವಾಗಿ ತೆಗೆದುಕೊಂಡು ಬರಲಾಯಿತು.
ಪೊಲೀಸರು ಸಂಪೂರ್ಣವಾಗಿ ಜೀರೋ ಟ್ರಾಫಿಕ್ ಅಥವಾ ಗ್ರೀನ್‌ ಕಾರಿಡಾರ (ಹಸಿರು ಪಥ) ಮೂಲಕ ಅಂಗಾಂಗಗಳನ್ನು ಸ್ಥಳಾಂತರಿಸಲು ಅವಕಾಶ ಕಲ್ಪಿಸಿಕೊಟ್ಟರು.
ಮೆದಳು ನಿಷ್ಕ್ರೀಯಗೊಂಡಿದ್ದರೂ ಕೂಡ ಅಂಗಾಂಗಗಳು ಕಾರ‍್ಯನಿರ್ವಹಿಸುತ್ತಿದ್ದವು. ಮೆದುಳು ನಿಷ್ಕ್ರಿಯಗೊಂಡ ಯುವಕನ ಪತ್ನಿ ಹಾಗೂ ಕುಟುಂಬ ಸದಸ್ಯರಿಗೆ ಆಪ್ತಸಮಾಲೋಚನೆ ಮಾಡಿ, ನೀವು ದಾನ ಮಾಡುವ ಅಂಗಾಂಗಗಳು ಜನರ ಜೀವ ಉಳಿಸುವಲ್ಲಿ ಸಹಕಾರಿಯಾಗಲಿವೆ ಎಂದು ಹೇಳಿದಾಗ, ಸ್ವಇಚ್ಛೆಯಿಂದ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿದರು.
ಮೆದುಳು ನಿಷ್ಕ್ರೀಯಗೊಂಡ ಯುವಕನ ಹೃದಯವನ್ನು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿಗೆ ಹೃದಯ ಶಸ್ತ್ರಚಿಕಿತ್ಸಾ ತಜ್ಞವೈದ್ಯರ ತಂಡವು ಹೃದಯ ಕಸಿ ಮಾಡುವಲ್ಲಿ ನಿರತರಾದರು. ಕೊಪ್ಪಳ ಜಿಲ್ಲೆಯ ಕುಣಿಕೇರಿ ತಾಂಡಾದ ಯುವಕನಾದ ಗಿರೀಷ ಸೋಮಪ್ಪ ಕುರಿ ಮೃತಪಟ್ಟರೂ ಕೂಡ ಜನರ ಜೀವ ಉಳಿಸಿ, ಇಬ್ಬರ ಬಾಳಿಗೆ ಬೆಳಕಾಗಿ ಸಾರ್ಥಕತೆ ಮೆರೆದ. ಮೃತಪಟ್ಟ ಯುವಕ ಪತ್ನಿ, ಮೂವರು ಮಕ್ಕಳು ಹಾಗೂ ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ.