ಚಿತ್ರದುರ್ಗ: ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಕಳೆದ ರಾತ್ರಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶ್ರೀಗಳಿಗೆ ಜೈಲಿನಲ್ಲಿ ಎದೆನೋವು ಕಾಣಿಸಿಕೊಂಡಿದೆ. ಹೀಗಾಗಿ, ತಕ್ಷಣವೇ ಅವರನ್ನು ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಮುರುಘಾ ಶ್ರೀಗಳಿಗೆ ಎದೆ ನೋವು: ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲುಇಂದು ಬೆಳಗ್ಗೆ ಶ್ರೀಗಳ ಆರೋಗ್ಯದಲ್ಲಿ ಏಕಾಏಕಿ ವ್ಯತ್ಯಾಸ ಕಾಣಿಸಿಕೊಂಡಿದೆ. ಹೀಗಾಗಿ, ಜೈಲು ಸಿಬ್ಬಂದಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ಕರೆತಂದರು. ಬೆಳಗ್ಗೆ ಜೈಲು ಸಿಬ್ಬಂದಿ ಮಾತ್ರೆ ಹಾಗೂ ಟೂತ್ ಬ್ರೆಷ್, ಬಟ್ಟೆ ನೀಡಿದ್ದಾರೆ. ಇದಾದ ಕೆಲಹೊತ್ತಿನ ಬಳಿಕ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ತಡರಾತ್ರಿ 3 ಗಂಟೆಗೆ ಅವರು ಜೈಲಿಗೆ ಬಂದಿದ್ದು ಸರಿಯಾಗಿ ನಿದ್ದೆ ಮಾಡಿರಲಿಲ್ಲ ಎಂದು ತಿಳಿದುಬಂದಿದೆ.