ದಾವಣಗೆರೆ: ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರ ಬಂಧನ ಖಂಡಿಸಿ ಸರ್ವಸಮಾಜದ ಮುರುಘಾಮಠದ ಅಭಿಮಾನಿಗಳಿಂದ ಕೈಗೆ ಕಪ್ಪುಪಟ್ಟಿ ಧರಿಸಿ ಶುಕ್ರವಾರ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ವಿರಕ್ತಮಠದ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ವಿವಿಧ ಸಮಾಜದ ಮುಖಂಡರು, ಅಭಿಮಾನಿಗಳು ಭಾಗವಹಿಸಿದ್ದ ಮುಖಂಡರು, ಷಡ್ಯಂತ್ರಕ್ಕೆ ನಡೆಸಿ ಶರಣರ ಹೆಸರಿಗೆ ಕಳಂಕ ತರಲು ಕೆಲವರು ಮುಂದಾಗಿದ್ದಾರೆ. ಇಂತಹ ಸಂಕಷ್ಟದಿAದ ನಮ್ಮ ಗುರುಗಳು ಗೆದ್ದುಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಮಾತನಾಡಿ, ಮುರುಘಾ ಶರಣರು ಎಲ್ಲಾ ಸಮುದಾಯಗಳಿಗೆ ಮಠಮಾನ್ಯಗಳನ್ನು ಕೊಟ್ಟು ಸತ್‌ಸಂಪ್ರದಾಯಗಳನ್ನು ಹಾಕಿಕೊಟ್ಟಿದ್ದಾರೆ. ಇದನ್ನು ಸಹಿಸದವರಿಂದ ಅಂದಿನಿAದಲೇ ಅವರ ಮೇಲೆ ಆರೋಪಗಳು, ಕುತಂತ್ರಗಳು ನಡೆದಿದ್ದವು. ಇವತ್ತು ಕುತಂತ್ರದಿAದ ಶರಣರನ್ನು ಸಿಲುಕಿಸಿದ್ದಾರೆ. ಶ್ರೀಗಳು ಜಯಶೀಲರಾಗಿ ಬರುತ್ತಾರೆ ಎಂಬ ನಂಬಿಕೆ ನಾಡಿನ ಜನರಿಗಿದೆ ಎಂದರು.