ಬೆಂಗಳೂರು: ಮುರುಘಾಶ್ರೀ ಪ್ರಕರಣದಲ್ಲಿ ಕಾನೂನಾತ್ಮಕ ತನಿಖೆ ಆಗಲಿ, ಸ್ವಾಮೀಜಿ ವಿರುದ್ಧ ಗಂಭೀರ ಆರೋಪ ಬಂದಿದೆ. ಸಂತ್ರಸ್ತೆಯರಿಗೆ ನ್ಯಾಯ ದೊರಕುವಂತಾಗಲಿ, ಮುರುಘಾ ಮಠ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದೆ,
ಆರೋಪಗಳ ಬಗ್ಗೆ ಕಾನೂನಾತ್ಮಕ ತನಿಖೆ ಆಗಲಿ ಎಂದು ಡಾ.ಯತಿಂದ್ರ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಡಾ.ಯತಿಂದ್ರ ಸಿದ್ದರಾಮಯ್ಯ, ಮುರುಘಾ ಮಠ ಪ್ರಗತಿಪರ ಚಿಂತನೆಯ ಮಠ, ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ಇತಿಹಾಸವುಳ್ಳ ಮಠ. ಈಗ ಮಠದ ಸ್ವಾಮೀಜಿಗಳ ಮೇಲೆ ಲೈಂಗಿಕ ಶೋಷಣೆ ಆರೋಪ ಬಂದಿದೆ, ಅಪ್ರಾಪ್ತ ಬಾಲಕಿಯರಿಂದ ಶ್ರೀಗಳ ವಿರುದ್ಧ ಆರೋಪ ಬಂದಿದೆ. ಸೂಕ್ತ ಕಾನೂನಾತ್ಮಕ ತನಿಖೆ ಮಾಡಿ ಸಂತ್ರಸ್ತೆಯರಿಗೆ ನ್ಯಾಯ ದೊರಕಿಸಿ ಎಂದು ಟ್ವೀಟ್ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.