ಕೋಲಾರ: ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ ತತ್ವ ಸಿದ್ದಾಂತಗಳಲ್ಲಿ ಬೆಳೆದಿರುತ್ತದೆ ಯಾವುದೇ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡುವುದು ಪಕ್ಷದ ಹೈಕಮಾಂಡ್ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಸ್ವರ್ಧೆ ಕೇವಲ ಊಹಾಪೋಹಗಳು ಅಷ್ಟೇ ಯಾವ ವೇದಿಕೆಯಲ್ಲೂ ಇದರ ಬಗ್ಗೆ ತೀರ್ಮಾನವಾಗಿಲ್ಲ ಎಂದು ಕುಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು
ನಗರದ ಹೊರವಲಯದ ಖಾದ್ರಿಪುರದಲ್ಲಿ ಶನಿವಾರ ಓಂಶಕ್ತಿ ಫೌಂಡೇಶನ್ ವತಿಯಿಂದ ಮೇಲ್ ಮರವತ್ತೂರು ಓಂಶಕ್ತಿ ದೇವಸ್ಥಾನಕ್ಕೆ ಉಚಿತ ಬಸ್ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಕಳೆದ ಗುರುವಾರ ಕೋಲಾರದಲ್ಲಿ ಪಕ್ಷದ ಕಾರ್ಯಕ್ರಮದ ನಂತರ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ನೇತೃತ್ವದಲ್ಲಿ ನಡೆದ ಆಂತರಿಕ ಸಭೆಯಲ್ಲಿ ಕೂಡ ಹೇಳಿದ್ದಾರೆ ಯಾರು ಕೂಡ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡುವಂತಿಲ್ಲ ಅಂತ ಅದು ರಾಜ್ಯದ ಮುಖ್ಯಮಂತ್ರಿಯಾಗಲಿ ಅಥವಾ ಪಕ್ಷದ ರಾಜ್ಯ ಅಧ್ಯಕ್ಷರ ಸ್ಪರ್ಧೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಂದ ಮಾತ್ರವೇ ಘೋಷಣೆ ಮಾಡುವುದು ಮುನಿರತ್ನ ಸ್ವರ್ಧೆ ವಿಚಾರ ಬರೀ ಸುಳ್ಳು ಸುದ್ದಿಯಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ಪಕ್ಷವು ಜನರೊಂದಿಗೆ ಬೆರೆತ ಸ್ಥಳೀಯ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಭಿವೃದ್ಧಿಯೇ ಮಾಡಿದ್ದರೆ ಇವತ್ತು ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರು, ದಲಿತರು ಹಾಗೂ ಕುರುಬ ಮತದಾರರನ್ನು ನಂಬಿಕೊಂಡು ಕೋಲಾರದಲ್ಲಿ ಸ್ವರ್ಧೆ ಮಾಡಲು ಬರತ್ತಾ ಇರಲಿಲ್ಲ ಈಗಾಗಲೇ ಎಲ್ಲಾ ವರ್ಗದ ಜನರು ಸಿದ್ದರಾಮಯ್ಯ ಅವರನ್ನು ವಿರೋಧಿಸಿದ್ದಾರೆ ಕೋಲಾರದಲ್ಲಿ ಕೂಡ ಅಲ್ಪಸಂಖ್ಯಾತರು, ದಲಿತರು, ಕುರುಬರಿಗೆ ಕಾಂಗ್ರೆಸ್ ಪಕ್ಷದಿಂದ ನ್ಯಾಯ ಸಿಗಲಿಲ್ಲ ಎಂದು ಬೇರೆ ಪಕ್ಷಗಳನ್ನು ಬೆಂಬಲಿಸಿದ್ದಾರೆ ಸಿದ್ದರಾಮಯ್ಯ ಎರಡು ಬಾರಿ ಕೋಲಾರ ಭೇಟಿ ಸಂದರ್ಭದಲ್ಲಿ ಕ್ಷೇತ್ರದ ಹೊರಗಿನವರೇ ಹೆಚ್ಚು ಅಭಿವೃದ್ಧಿ ಹೆಸರಿನಲ್ಲಿ ಬಂದಿದ್ದರೆ ಕ್ಷೇತ್ರದ ಹುಡುಕುವ ಪರಿಸ್ಥಿತಿ ಬರತ್ತಾ ಇರಲಿಲ್ಲ ಈ ಬಾರಿ ಕೋಲಾರದಲ್ಲಿ ಸಿದ್ದರಾಮಯ್ಯ ಸೋತು ಮನೆಗೆ ಹೋಗುವುದು ಗ್ಯಾರಂಟಿ ಎಂದರು.
ಕೋಲಾರ ವಿಧಾನಸಭಾ ಕ್ಷೇತ್ರದ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಓಂಶಕ್ತಿ ದೇವಸ್ಥಾನಕ್ಕೆ ಹೋಗಲು ಕಳೆದ ಒಂದು ತಿಂಗಳಿಂದ ಸತತವಾಗಿ ಬಸ್ ವ್ಯವಸ್ಥೆ ಮಾಡಲಾಗಿದೆ ಈ ಸೇವೆಯನ್ನು ಫೆಬ್ರವರಿ 3 ರ ವರಗೆ ಓಂಶಕ್ತಿ ಫೌಂಡೇಶನ್ ವತಿಯಿಂದ ನಡೆಯಲಿದೆ ಸಾರ್ವಜನಿಕರಿಗೆ ಕೊರೊನಾ ಸಂದರ್ಭದಲ್ಲಿನ ಕಷ್ಟಗಳು ಮತ್ತೆ ಮರುಕಳಿಸದಿರಲಿ ಜೊತೆಗೆ ರಾಜ್ಯ ಮತ್ತು ಜಿಲ್ಲೆ ಅಭಿವೃದ್ಧಿಯ ಪಥದಲ್ಲಿ ಸಾಗಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ಪ್ರತಿಯೊಬ್ಬರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಕರುಣಿಸಲಿ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸಾ.ಮಾ ಬಾಬು, ಕಾವ್ಯ, ಚಲುವರಾಜ್, ಗೌತಮ್, ಭರತ್, ನವೀನ್, ಮಂಜುನಾಥ್, ಅಪ್ಪಿ ಮುಂತಾದವರು ಇದ್ದರು