ಬೇಟೆ ಆಡುವಲ್ಲಿ ಮುಂಚೂಣಿಯಲ್ಲಿರುವ ಮುಧೋಳದ ನಾಯಿ ತಳಿ ಈಗ ಪ್ರಧಾನಮಂತ್ರಿಗಳ ವಿಶೇಷ ರಕ್ಷಣಾಪಡೆ ಸೇರಿಕೊಂಡಿವೆ. ಹೊಸದಿಲ್ಲಿಯಿಂದ ಮುಧೋಳಕ್ಕೆ ಆಗಮಿಸಿದ್ದ ಎಸ್‌ಪಿಜಿ ಒಬ್ಬ ವೈದ್ಯ ಹಾಗೂ ಇಬ್ಬರು ಯೋಧರ ತಂಡ ಎರಡು ಗಂಡು ಜಾತಿಯ ಮುಧೋಳ ನಾಯಿ ಮರಿಗಳನ್ನು ಒಯ್ದಿದ್ದಾರೆ.
ಮುಧೋಳ ನಾಯಿಮರಿಗಳಿಗೆ ದೆಹಲಿಯಲ್ಲಿ ವಿಶೇಷ ತರಬೇತಿ ನೀಡಲಾಗುತ್ತಿದ್ದು ನಂತರ ಅವು ಎಸ್‌ಪಿಜಿ ತಂಡವನ್ನು ಸೇರಿಕೊಳ್ಳಲಿವೆ. ಮುಧೋಳ ಸಮಿಪದ ತಿಮ್ಮಾಪೂರ ನಾಯಿ ತಳಿ ಸಂವರ್ಧನ ಕೇಂದ್ರದಿಂದ ಈ ನಾಯಿಮರಿಗಳನ್ನು ಪಡೆಯಲಾಗಿದೆ. ಈಗಾಗಲೇ ಕರ್ನಾಟಕ ಮೀಸಲು ಪಡೆ, ಬಿಎಸ್‌ಎಫ್ ಹಾಗೂ ಸೇನೆಗೆ ಸೇರಿರುವ ಈ ತಳಿಗಳನ್ನು ಈಗ ಪ್ರಧಾನಮಂತ್ರಿಗಳ ರಕ್ಷಣಾ ಪಡೆಗೆ ಸೇರಿಸಿರುವುದು ವಿಶೇಷ.