ಮುದ್ದೇಬಿಹಾಳ: ಕಾಲೇಜಿನ ಹಾಸ್ಟೇಲ್ ವಿದ್ಯಾರ್ಥಿ ಆತ್ಮಹತ್ಯೆ

ಅಜಯ
Advertisement

ವಿಜಯಪುರ : ಆಕ್ಸಪರ್ಡ್ ಪಿಯು ಕಾಲೇಜು ಹಾಸ್ಟೆಲ್ ನಲ್ಲಿ ನೇಣು ಹಾಕಿಕೊಂಡಿರೊ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ.
ಮುದ್ದೇಬಿಹಾಳ ತಾಲೂಕಿನ ನಾಗರಾಬೆಟ್ಟ ವಸತಿ ಸಹಿತ ಪಿಯು ಕಾಲೇಜಿನ ಹಾಸ್ಟೇಲ್ ನಲ್ಲಿ ಘಟನೆ ನಡೆದಿದ್ದು, ಅಜಯಕುಮಾರ ನುಚ್ಚಿ (17) ಮೃತಪಟ್ಟಿರುವ ವಿದ್ಯಾರ್ಥಿ.
ಶ್ರೀ ದತ್ತಾತ್ರೆಯ ಎಜುಕೇಶನ್ ಟ್ರಸ್ಟ್ ನ ಆಕ್ಸಫರ್ಡ್ ಎಕ್ಸಫರ್ಟ್ ಕಾಲೇಜಿನ ಹಾಸ್ಟೆಲ್ ಮೆಲ್ಬಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ವಿದ್ಯಾರ್ಥಿ ಮೃತದೇಹ ನೇಣು ಬಿಗಿದ ಸ್ಥಿಯಲ್ಲಿ ಪತ್ತೆಯಾಗಿದೆ.
ಸಾವಿನ ಬಗ್ಗೆ ಕುಟುಂಬಸ್ಥರ ಸಂಶಯ : ವಿದ್ಯಾರ್ಥಿ ಅಜಯಕುಮಾರ ನುಚ್ಚಿ ವಿಜಯಪುರ ನಗರ ಮೂಲದವ ಎಂದು ತಿಳಿದು ಬಂದಿದೆ. ಒಂದು ವಾರದ ಹಿಂದೆ ವಿದ್ಯಾರ್ಥಿ ಅಜಯಕುಮಾರ ಶ್ರೀ ದತ್ತಾತ್ರೆಯ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಬಿ.ಜಿ.ಹಿರೇಮಠ ಪುತ್ರನೊಂದಿಗೆ ಜಗಳವಾಡಿದ್ದ ಬಳಿಕ ಅಜಯಕುಮಾರ ಪೋಷಕರು ಕಾಲೇಜಿಗೆ ತೆರಳಿ ಮಗನಿಗೆ ಭೇಟಿಯಾಗಿ ಬಂದಿದ್ದರು. ಏಕ ಏಕಿ ಇಂದು ನಸುಕಿನ ಜಾವ ಕಾಲೇಜು ಸಿಬ್ಬಂದಿ ಮಗ ನೇಣು ಹಾಕಿಕೊಂಡಿರುವುದಾಗಿ ತಿಳಿಸಿದ್ದು, ಮಗನ ಸಾವಿನ ಬಗ್ಗೆ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿ, ಕಾಲೇಜು ಆಡಳಿತ ಮಂಡಳಿ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸ್ ರು ಬೇಟಿ ನೀಡಿದ್ದು, ವಿದ್ಯಾರ್ಥಿ ಶವದ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.