ಬೆಳಗಾವಿ: ಶಾಲಾ ಮುಖ್ಯೋಪಾದ್ಯಾಯರ ಕಿರುಕುಳದಿಂದ ಬೇಸತ್ತು ರೈಲಿಗೆ ತಲೆ ಒಡ್ಡಿ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ರಾಯಬಾಗ ರೈಲು ನಿಲ್ದಾಣ ಸಮೀಪ ಶನಿವಾರದಂದು ನಡೆದಿದೆ.
ಖಾಸಗಿ ಅನುದಾನಿತ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕುಡಚಿ ನಿವಾಸಿ ಅನ್ನಪೂರ್ಣ ರಾಜು ಬಸಾಪೂರೆ (55) ಎಂಬುವರೇ ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಶಿಕ್ಷಕಿ.
ಅನ್ನಪೂರ್ಣ ಖಾಸಗಿ ಶಿಕ್ಷಣ ಸಂಸ್ಥೆಯ ಹೆಡ್ ಮಾಸ್ಟರ್ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಡೆತ್ ನೋಟ್ ನಲ್ಲಿ ಹೆಡ್ ಮಾಸ್ಟರ್ ಹೆಸರು ಬರೆದಿಟ್ಟಿದ್ದಾರೆ. ನನ್ನ ಸಾವಿಗೆ ಶಾಲೆ ಮುಖ್ಯ ಶಿಕ್ಷಕ ಕಾರಣ ಎಂದು ಉಲ್ಲೇಖಿಸಿ ಬರೆದಿರುವ ಡೆತ್‌ನೋಟ್ ಪತ್ತೆಯಾಗಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಯಬಾಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.