ಮುಂಬೈ: ಅರೇಬಿಕ್ ಅಕಾಡೆಮಿ ಉದ್ಧಾಟಿಸಿದ ಮೋದಿ

Advertisement

ಮುಂಬೈ: ದಾವೂದಿ ಬೊಹ್ರಾ ಸಮುದಾಯದ ಪ್ರಮುಖ ಶಿಕ್ಷಣ ಸಂಸ್ಥೆಯಾದ ಅಲ್ಜಮಿಯಾ-ತುಸ್-ಸೈಫಿಯಾ ಅರೇಬಿಕ್ ಅಕಾಡೆಮಿಯ ಮುಂಬೈ ಕ್ಯಾಂಪಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದರು.
ಉಪನಗರ ಅಂಧೇರಿಯ ಮರೋಲ್‌ನಲ್ಲಿರುವ ಹೊಸ ಕ್ಯಾಂಪಸ್​​ನಲ್ಲಿ ಭಾಗವಹಿಸಿದ ಮೋದಿ, ನಾನು ಅದೃಷ್ಟಶಾಲಿ. ನಾನು 4 ತಲೆಮಾರುಗಳಿಂದ ಈ ಕುಟುಂಬದೊಂದಿಗೆ ಸಂಪರ್ಕ ಹೊಂದಿದ್ದೇನೆ. ಎಲ್ಲಾ 4 ತಲೆಮಾರುಗಳು ನನ್ನ ಮನೆಗೆ ಭೇಟಿ ನೀಡಿವೆ ಎಂದು ಮೋದಿ ಹೇಳಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಕುಟುಂಬದ ಸದಸ್ಯನಾಗಿ ಭಾಗವಹಿಸುತ್ತಿದ್ದೇನೆ, “ಪ್ರಧಾನಿಯಾಗಿ ಅಲ್ಲ” ಎಂದಿದ್ದಾರೆ.